ಪ್ರತಿಭಾವಂತ ನಟ ‘ಸಂಚಾರಿ’ ವಿಜಯ್ ಅವರ ಸಾವಿನ ಸುದ್ದಿ ಕೇಳಿ ಆಘಾತವಾಯಿತು. ಕುಟುಂಬದ ಒಬ್ಬ ಪ್ರಧಾನ ವ್ಯಕ್ತಿ ಈ ರೀತಿ ಅಕಾಲಿಕ ಮರಣಕ್ಕೆ ತುತ್ತಾದಾಗ ಆ ಕುಟುಂಬದ ಪರಿಸ್ಥಿತಿ ಹೇಳತೀರದು. ಅಂತಹ ಸಂದಿಗ್ಧ ಸ್ಥಿತಿಯಲ್ಲೂ ವಿಜಯ್ ಅವರ ಅಂಗಾಂಗ ದಾನ ಮಾಡಲು ಅವರ ಕುಟುಂಬದವರು ನಿರ್ಧರಿಸಿದ್ದು ನಮ್ಮನ್ನು ಮೂಕವಿಸ್ಮಿತರನ್ನಾಗಿಸಿತು. ಇಂದು ವಿಜಯ್ ಅವರು ನಮ್ಮೊಡನೆ ಇಲ್ಲದಿದ್ದರೂ ಅವರ ಕುಟುಂಬದ ಈ ನಿರ್ಧಾರವು ಅವರನ್ನು ಜನಮಾನಸದಲ್ಲಿ ಒಬ್ಬ ಜೀವಂತ ವ್ಯಕ್ತಿಯನ್ನಾಗಿಸಿದೆ. ಜೊತೆಗೆ ಅಂಗಾಂಗ ಪಡೆದವರ ಮನದಲ್ಲೂ ಒಂದು ಶಾಶ್ವತ ಸ್ಥಾನವನ್ನು ಪಡೆಯುವಂತೆ ಮಾಡಿದೆ.→
-ವಸಂತ ಕುಮಾರ್ ಮಲ್ಲಾಪುರ,ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.