ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲೂರು ಸಿದ್ದಪ್ಪಾಜಿ ದೇವಸ್ಥಾನ ಹತ್ತಿರ ‘ಪ್ರಾಣಿಬಲಿ’ಯನ್ನು ನಿಷೇಧ ಮಾಡಿರುವ ಕ್ರಮ ಸರಿಯಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ಹೇಳಿರುವುದು (ಪ್ರ.ವಾ., ಜುಲೈ23) ಅಚ್ಚರಿ ಮೂಡಿಸಿತು. ಗಣ್ಯರೆನಿಸಿಕೊಂಡವರೇ ಇಂಥ ಆಚರಣೆಗಳನ್ನು ಬೆಂಬಲಿಸುವುದು ಸರಿಯಲ್ಲ.
ದೇವಸ್ಥಾನ ಹತ್ತಿರ ಪ್ರಾಣಿಬಲಿ ಕೊಟ್ಟು ಅವುಗಳ ತ್ಯಾಜ್ಯವನ್ನು ಅಕ್ಕಪಕ್ಕದಲ್ಲಿ ಎಸೆಯುವುದರಿಂದ, ಅದು ಕೊಳೆತು, ಪರಿಸರ ಮಲಿನವಾಗುವುದರ ಜೊತೆಗೆ ರೋಗ ರುಜಿನಗಳಿಗೂ ಕಾರಣವಾಗಬಹುದಲ್ಲವೇ?
ಮಾಂಸಾಹಾರ ಸೇವನೆ ತಪ್ಪಲ್ಲ, ದೇವರ ಹೆಸರಿನಲ್ಲಿ, ದೇವಸ್ಥಾನದ ಅಕ್ಕಪಕ್ಕದ ಬಯಲಿನಲ್ಲಿ ಪ್ರಾಣಿ ಬಲಿ ಕೊಟ್ಟು, ಪರಿಸರವನ್ನು ಹಾಳು ಮಾಡಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.