ADVERTISEMENT

ವಿರೋಧಕ್ಕಾಗಿ ವಿರೋಧ ಬೇಡ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 17:49 IST
Last Updated 20 ಡಿಸೆಂಬರ್ 2019, 17:49 IST

‘ಜನಶಕ್ತಿಗೆ ಹೆದರಿ ನಿಷೇಧಾಜ್ಞೆ ಜಾರಿ ಮಾಡಿದ ಪುಕ್ಕಲು ಸರ್ಕಾರ’ ಎಂದು ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಅವರು ಸರ್ಕಾರವನ್ನು ಟೀಕಿಸಿದ್ದಾರೆ. ಇದು ಸರಿಯೇ? ದೇಶದ ಹಲವು ಕಡೆ ಸಾರ್ವಜನಿಕರ ಆಸ್ತಿಪಾಸ್ತಿಯು ಪ್ರತಿಭಟನೆ ಸಂದರ್ಭದಲ್ಲಿ ಅಪಾರ ಹಾನಿಗೆ ಒಳಗಾಗಿರುವುದು ಅವರಿಗೆ ತಿಳಿಯದೇ?

ಪ್ರತಿಭಟನೆಗಳು ಶಾಂತಿಯುತವಾಗಿ ನಡೆದರೆ ನಿಷೇಧಾಜ್ಞೆ ಜಾರಿ ಮಾಡುವ ಅವಶ್ಯಕತೆ ಇರದು. ಇದು ಗೊತ್ತಿದ್ದೂ ವಿರೋಧಕ್ಕಾಗಿ ವಿರೋಧ ಮಾಡಿದರೆ ಏನು ಪ್ರಯೋಜನ? ರಾಜ್ಯದ ಆಡಳಿತದ ಹೊಣೆ ಹೊತ್ತವರಿಗೆ ಜನರ ಪ್ರಾಣ ಮತ್ತು ನಾಡಿನ ಆಸ್ತಿ ಕಾಪಾಡುವ ಜವಾಬ್ದಾರಿ ಇರುತ್ತದೆ. ಇಂತಹ ಸಂದರ್ಭದಲ್ಲಿ ಸರ್ಕಾರವು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಸಿದ್ದರಾಮಯ್ಯ ಅವರು ಇದನ್ನು ಅರಿಯರೇ?

ಉಮಾಶಂಕರ್‌,ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.