ADVERTISEMENT

ವಿಷಯಾಧಾರಿತ ಚರ್ಚೆ ನಡೆಯಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 13 ಸೆಪ್ಟೆಂಬರ್ 2022, 19:30 IST
Last Updated 13 ಸೆಪ್ಟೆಂಬರ್ 2022, 19:30 IST

ವಿಧಾನಮಂಡಲದ ಈ ಬಾರಿಯ ಅಧಿವೇಶನದಲ್ಲಿ, ರಾಜ್ಯದಲ್ಲಿ ಪ್ರವಾಹ ಮತ್ತು ಅದರಿಂದಾದ ನಷ್ಟ, ಭ್ರಷ್ಟಾಚಾರದ ಆರೋಪಗಳು, ನಿರುದ್ಯೋಗ ಸಮಸ್ಯೆ, ನೇಮಕಾತಿಯಲ್ಲಿ ಭ್ರಷ್ಟಾಚಾರ, ದಿನನಿತ್ಯದ ಆಹಾರ ಪದಾರ್ಥ, ಗ್ಯಾಸ್, ಪೆಟ್ರೋಲ್ ಬೆಲೆ ಏರಿಕೆ, ರೈತರ ಸಮಸ್ಯೆಗಳು, ರಾಜ್ಯದ ಸಾಲದ ಹೊರೆ, ಜಿಎಸ್‌ಟಿ ಪರಿಹಾರಧನ, ಕನ್ನಡ ಭಾಷೆ ಬಳಕೆ, ಕೋಮುವಾದ, ಬ್ರ್ಯಾಂಡ್ ಬೆಂಗಳೂರು ಕನಸುಗಳು, ರಸ್ತೆಗುಂಡಿಗಳಂತಹ ಪ್ರಮುಖ ಬಹುಚರ್ಚಿತ ವಿಷಯಗಳ ಬಗ್ಗೆ ಆರೋಗ್ಯಕರ ಚರ್ಚೆ ಆಗಲಿ.

ಅಧಿವೇಶನದ ಸ್ವಲ್ಪ ಸಮಯವೂ ಹಾಳಾಗದಂತೆ ನಮ್ಮ ಎಲ್ಲ ರಾಜಕಾರಣಿಗಳು ಚರ್ಚಿಸಿ ಸಕಾರಾತ್ಮಕ
ಪರಿಹಾರ ನೀಡುವ ಕೆಲಸಗಳು ತುರ್ತಾಗಿ ಆಗಬೇಕಾಗಿದೆ. ವಿಷಯಾಧಾರಿತ ಚರ್ಚೆಗೆ ಅಧಿವೇಶನದಲ್ಲಿ ಈ ಬಾರಿಯಾದರೂ ಅವಕಾಶ ಸಿಗಲಿ.

- ವಿನಯಕುಮಾರ್ ಚಿಂಚೋಳಿ,ಬಲಶೆಟ್ಟಿಹಾಳ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.