ADVERTISEMENT

ಮೌಲ್ಯಮಾಪನ ನಿಜವೇ?

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 19:30 IST
Last Updated 30 ಆಗಸ್ಟ್ 2018, 19:30 IST

ಸಚಿವರ ಕಾರ್ಯವೈಖರಿಯ ಬಗ್ಗೆ ಮೌಲ್ಯಮಾಪನ ಮಾಡುವುದಾಗಿ ಜೆಡಿಎಸ್‌ ವರಿಷ್ಠ ದೇವೇಗೌಡರು ಹೇಳಿದ್ದಾಗಿ ವರದಿಯಾಗಿದೆ. ಇದೇ ರೀತಿ ಕಾಂಗ್ರೆಸ್ ಸಚಿವರನ್ನು ಸಹ ಮೌಲ್ಯಮಾಪನಕ್ಕೆ ಒಳಪಡಿಸಲಾಗುವುದು ಎಂದು ಕಾಂಗ್ರೆಸ್‌ ಮುಖಂಡರೂ ಹೇಳಿದ್ದಾರೆ.

ಸಚಿವರ ಪ್ರೋಗ್ರೆಸ್ ರಿಪೋರ್ಟ್ ಸಿದ್ಧಪಡಿಸುವುದು ಒಳ್ಳೆಯ ಚಿಂತನೆಯಾಗಿದ್ದರೂ ಇದು ಪಾರದರ್ಶಕವಾಗಿನಡೆಯುವುದೋ ಅಥವಾ ಪತ್ರಿಕಾ ಹೇಳಿಕೆಯಾಗಿ ಉಳಿಯುವುದೋ ಎಂಬ ಬಗ್ಗೆ ಸಂದೇಹಗಳಿವೆ.

ಸಚಿವರ ಕಾರ್ಯವೈಖರಿಗೆ ಒಂದು ಮಾನದಂಡವನ್ನು ನಿಗದಿಪಡಿಸಿ, ಸಮ್ಮಿಶ್ರ ಸರ್ಕಾರದಲ್ಲಿನ ಎಲ್ಲ ಸಚಿವರನ್ನು ಮೌಲ್ಯಮಾಪನಕ್ಕೆ ಒಳಪಡಿಸಬೇಕು. ಕಳಪೆ ಸಾಧನೆ ಮಾಡಿರುವಂಥವರನ್ನು ಸಂಪುಟದಿಂದ ಕೈಬಿಡುವುದೇ ಒಳಿತು.

ADVERTISEMENT

ಹೀಗೆ ಮಾಡುವುದರಿಂದ ನಿದ್ದೆಯಲ್ಲಿರುವ ಮಂತ್ರಿಗಳನ್ನು ಎಬ್ಬಿಸಿದಂತಾಗುವುದರ ಜೊತೆಗೆ ಹೊಸಬರಿಗೆ ಅವಕಾಶ ಕೊಟ್ಟಂತೆಯೂ ಆಗುತ್ತದೆ.

ಲಕ್ಷ್ಮೀಕಾಂತರಾಜು ಎಂ. ಜಿ., ಮಠಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.