ADVERTISEMENT

ಗ್ರಾಮಸ್ಥರ ಮಾದರಿ ನಡೆ

ಶ್ವೇತಾ ಎನ್. ಶಿವಮೊಗ್ಗ
Published 2 ಡಿಸೆಂಬರ್ 2019, 17:19 IST
Last Updated 2 ಡಿಸೆಂಬರ್ 2019, 17:19 IST

ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಅವರು ಮತ ಯಾಚಿಸುವುದಕ್ಕೆ ಅವರ ಸ್ವಗ್ರಾಮ ತೆಲಸಂಗದಲ್ಲಿ ವಿರೋಧ ವ್ಯಕ್ತವಾಗಿರುವ ಸುದ್ದಿ ಓದಿ (ಪ್ರ.ವಾ., ನ. 30) ನಿಜಕ್ಕೂ ಸಂತಸವಾಯಿತು. ಪ್ರಸಕ್ತ ಸನ್ನಿವೇಶದಲ್ಲಿ ಈ ಗ್ರಾಮಸ್ಥರ ನಡೆ ಮಾದರಿಯಾದುದು. ನಮ್ಮ ಜನರಿಗೆ ಅಧಿಕಾರ ನೀಡುವುದೂ ಗೊತ್ತು ಕಸಿದುಕೊಳ್ಳುವುದೂ ಗೊತ್ತು ಎಂಬ ಮಾತು ಮುನ್ನೆಲೆಗೆ ಬಂದಂತಿದೆ.

ಇಂತಹವರು ಪುನಃ ಗೆದ್ದು ಬಂದ ಮೇಲೆ ಬೇರೆ ಪಕ್ಷ ಸೇರುವುದಿಲ್ಲ ಎಂಬ ಯಾವ ನಂಬಿಕೆಯ ಮೇಲೆ ಜನ ಅವರಿಗೆ ಮತ ಹಾಕಬೇಕು? ಇವರು ಬಯಸುವುದು ಪ್ರಜೆಗಳ ಹಿತವನ್ನೊ ಅಥವಾ ಸ್ವಹಿತವನ್ನೊ ಎಂಬುದನ್ನು ಮತದಾರ ಪ್ರಭುಗಳು ಅವಲೋಕಿಸಿ ಮತ ನೀಡಬೇಕಾಗಿದೆ. ಪ್ರಜಾಪ್ರಭುತ್ವದ ಪಾವಿತ್ರ್ಯವನ್ನು ಎತ್ತಿ ಹಿಡಿಯಬೇಕಾಗಿದೆ. ಪ್ರತಿ ಕ್ಷೇತ್ರದಲ್ಲೂ ಇಂತಹ ಬದಲಾವಣೆ ಪರ್ವ ಪ್ರಾರಂಭವಾಗಬೇಕಾಗಿದೆ. ಆಗ ಮಾತ್ರ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯ ಈಡೇರಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT