ADVERTISEMENT

ವಾಚಕರ ವಾಣಿ | ರಾಮನನ್ನು ಅರ್ಥೈಸುವುದು ಹೇಗೆ?

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 19:30 IST
Last Updated 5 ಆಗಸ್ಟ್ 2020, 19:30 IST

ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ಕೇಳಿದ ಮೇಲೆ ಮನಸ್ಸಿನಲ್ಲಿ ಹಲವು ಪ್ರಶ್ನೆಗಳೆದ್ದವು. ರಾಮಮಂದಿರವನ್ನು ಆಧುನಿಕ ರೀತಿಯಲ್ಲಿ ಕಟ್ಟಬಹುದು, ಆದರೆ ರಾಮನನ್ನು ಸಮಕಾಲೀನವಾಗಿ ಅರ್ಥೈಸುವುದು ಹೇಗೆ? ರಾಮನನ್ನು ಎಲ್ಲರೂ ಗೌರವಿಸಬಹುದು. ಆದರೆ ಎಲ್ಲರಲ್ಲೂ ರಾಮ ಇರಬಲ್ಲನೇ? (ಉದಾಹರಣೆಗೆ ರಾಜಕಾರಣಿಗಳಲ್ಲಿ). ರಾಮ ಜನ್ಮಭೂಮಿ ಆಂದೋಲನವನ್ನು ಸ್ವಾತಂತ್ರ್ಯ ಚಳವಳಿಯ ಜತೆ ಹೋಲಿಸುವುದು ಸರಿಯೇ? ಆಸ್ಥೆ, ಶ್ರದ್ಧೆ, ಮರ್ಯಾದಾ ಪದಗಳನ್ನು ಧಾರ್ಮಿಕ ಅರ್ಥದಲ್ಲಷ್ಟೇ ಬಳಸುವುದು ಸರಿಯೇ? ‘ರಾಮನನ್ನು ವನವಾಸದಿಂದ ಬಿಡಿಸಿದಂತಾಯಿತು’ ಎಂಬ ವ್ಯಾಖ್ಯಾನ ಉಚಿತವೇ?

-ಎಚ್.ಎಸ್.ಮಂಜುನಾಥ, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT