ADVERTISEMENT

ಬ್ಯಾಂಕಿನವರು ಸ್ಪಂದಿಸಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 27 ಫೆಬ್ರುವರಿ 2019, 20:00 IST
Last Updated 27 ಫೆಬ್ರುವರಿ 2019, 20:00 IST

ರಾಜ್ಯದ ಮಕ್ಕಳ ವಿದ್ಯಾರ್ಥಿ ವೇತನಕ್ಕಾಗಿ ಈ ವರ್ಷ ಅದಕ್ಕೆಂದೇ ನಿಗದಿಪಡಿಸಿದ ತಂತ್ರಾಂಶದಲ್ಲಿ ಅರ್ಜಿ ಕರೆಯಲಾಗಿತ್ತು. ಮಕ್ಕಳ ಬ್ಯಾಂಕ್ ಖಾತೆಯಿಂದ ಹಿಡಿದು ಆಧಾರ್, ಜಾತಿ, ವಾರ್ಷಿಕ ವರಮಾನ ಪ್ರಮಾಣ ಪತ್ರ ಸೇರಿದಂತೆ ಎಲ್ಲಾ ದಾಖಲೆಗಳ ಮಾಹಿತಿಯನ್ನೂ ಅದರಲ್ಲಿ ನಮೂದಿಸಲಾಗಿತ್ತು. ಅರ್ಜಿ ಸಲ್ಲಿಸುವಾಗ ಬ್ಯಾಂಕಿನ ಖಾತೆಯ ಆಧಾರ್ ಸೀಡ್ ಮಾಡಿಸಲೇಬೇಕೆಂಬ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿ ಇರಲಿಲ್ಲ. ಇನ್ನೇನು ವಿದ್ಯಾರ್ಥಿ ವೇತನ ಬಿಡುಗಡೆ ಆಗುತ್ತದೆ ಎನ್ನುವಷ್ಟರಲ್ಲಿ, ಆಧಾರ್ ಸೀಡ್ ಆಗಿಲ್ಲವೆಂದು ಹಲವು ಮಕ್ಕಳ ಬ್ಯಾಂಕ್ ಖಾತೆಗಳಿಗೆ ಹಣ ಬಿಡುಗಡೆ ಮಾಡಲಾಗಿಲ್ಲ.

ನಂತರ ಪೋಷಕರು ಆಧಾರ್ ಸಂಖ್ಯೆಯನ್ನು ಖಾತೆಯೊಂದಿಗೆ ಜೋಡಿಸಲು ಬ್ಯಾಂಕಿಗೆ ಹೋದರೆ ಸಿಬ್ಬಂದಿಯಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಇದರಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ ಚಾತಕಪಕ್ಷಿಯಂತೆ ಕಾಯುತ್ತಿದ್ದ ಹಲವು ಮಕ್ಕಳು ಹಾಗೂ ಪೋಷಕರಿಗೆ ನಿರಾಸೆಯಾಗಿದೆ. ಬ್ಯಾಂಕಿನ ಸಿಬ್ಬಂದಿ ಇತರ ಕೆಲಸಗಳ ನಡುವೆ ಇದನ್ನೂ ಒಂದು ಮುಖ್ಯ ಕೆಲಸವೆಂದು ಭಾವಿಸಿ ಆಧಾರ್‌ ಸೀಡ್‌ ಮಾಡಿಸಲು ಸಹಕರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT