ADVERTISEMENT

ಕಳೆದುಹೋದ ಭಾವನಾತ್ಮಕ ನಂಟು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 19:31 IST
Last Updated 9 ಫೆಬ್ರುವರಿ 2021, 19:31 IST

ಬಳ್ಳಾರಿ‌ ಜಿಲ್ಲೆಯನ್ನು ವಿಭಜನೆ ಮಾಡಿರುವುದರಿಂದ ಜಿಲ್ಲೆಯ‌ ಜನ ಹೊಸಪೇಟೆಯ ತುಂಗಭದ್ರಾ ಜಲಾಶಯ, ನಾಡಿನ ಹೆಮ್ಮೆಯಾಗಿರುವ ಐತಿಹಾಸಿಕ ಹಂಪಿಯಿಂದ ಭಾವನಾತ್ಮಕ ನಂಟನ್ನು ಕಳೆದು ಕೊಂಡಂತಾಗಿದೆ. ಆದರೆ ಆಡಳಿತಾತ್ಮಕವಾಗಿ ನೋಡುವುದಾದರೆ, ತಾಲ್ಲೂಕುಗಳು ಜಿಲ್ಲಾ ಕೇಂದ್ರಕ್ಕೆ ಹತ್ತಿರವಿದ್ದರೆ ಒಳಿತು. ಕೆಲ ತಾಲ್ಲೂಕುಗಳು ಬಳ್ಳಾರಿ ಜಿಲ್ಲಾ ಕೇಂದ್ರದಿಂದ ದೂರದಲ್ಲಿ ಇದ್ದಿದ್ದರಿಂದ ಆಡಳಿತಕ್ಕೆ ಕಷ್ಟವಾಗುತ್ತಿತ್ತು. ಹೊಸ ಜಿಲ್ಲೆ ರಚನೆಯು ಅಭಿವೃದ್ಧಿಯಿಂದ ದೂರ ಉಳಿದ ತಾಲ್ಲೂಕುಗಳ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದಾದರೆ, ನಾವು‌ ಬಳ್ಳಾರಿ ಜಿಲ್ಲಾ ವಿಭಜನೆಯನ್ನು ಒಪ್ಪಿಕೊಳ್ಳಲೇಬೇಕು. ನೂತನ ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಈಗ ವೇಗ ದೊರೆಯಲಿ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಅಭಿವೃದ್ಧಿ ಹೊಂದುವಂತೆ ಸರ್ಕಾರ ನೋಡಿಕೊಳ್ಳಲಿ.

- ಉಮ್ಮೆ ಅಸ್ಮ ಕೆ.ಎಸ್.,ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT