ರಾಜಕಾಲುವೆ ಮತ್ತು ಇತರೆ ಒತ್ತುವರಿ ತೆರವು ಕಾರ್ಯಾಚರಣೆಯು ಬೆಂಗಳೂರಿನಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದರೊಂದಿಗೆ ಕೆಲವು ಪ್ರಶ್ನೆಗಳಿಗೂ ಕಾರಣವಾಗಿದೆ. ತೆರವಿಗೊಳಗಾದ ಪ್ರತಿಯೊಂದು ಮನೆ, ಅಪಾರ್ಟ್‌ಮೆಂಟ್ ಮತ್ತು ವಿಲ್ಲಾದವರು ಸಂಬಂಧಿಸಿದ ಸಂಸ್ಥೆಗಳಿಂದ ಎಲ್ಲಾ ರೀತಿಯ ಅನುಮತಿಗಳನ್ನು ಪಡೆದು ತಲೆ ಮೇಲೊಂದು ಸೂರನ್ನು ಮಾಡಿಕೊಂಡಿರಬಹುದು. ಕೆಲವರು ದಶಕಗಳ ಕಾಲ ಅಲ್ಲಿ ವಾಸ್ತವ್ಯ ಮಾಡಿದ್ದಾರೆ.
ನೀರು, ವಿದ್ಯುತ್, ಒಳಚರಂಡಿ ಸೌಲಭ್ಯ ನೀಡುವಾಗ ಗೋಚರವಾಗದ ನ್ಯೂನತೆ ಈಗ ಕಂಡಿದ್ದು ಹೇಗೆ? ನ್ಯೂನತೆಗಳಿದ್ದರೂ ಅನುಮತಿ ನೀಡಿದ್ದು ಯಾರ ತಪ್ಪು? ಮೊಗ್ಗಿನಲ್ಲಿಯೇ ಚಿವುಟಿದ್ದರೆ ಈ ಸಮಸ್ಯೆ ಉಂಟಾಗುತ್ತಿತ್ತೇ? ಯಾರ ತಪ್ಪಿಗೆ ಯಾರಿಗೆ ಶಿಕ್ಷೆ? ಲಕ್ಷಾಂತರ, ಕೋಟ್ಯಂತರ ರೂಪಾಯಿ ವ್ಯಯಿಸಿ ನಿರ್ಮಿಸಿದ ಮನೆ ಕಣ್ಣೆದುರೇ ಬುಲ್ಡೋಜರ್‌ಗೆ ಆಹುತಿಯಾಗುವ ಶಿಕ್ಷೆ ಸಹಿಸಲು ಕಷ್ಟಸಾಧ್ಯ. ಇದು, ಬುಲ್ಡೋಜರ್ ಅನ್ನು ಕಾರ್ಯಾಚರಣೆಗೆ ಇಳಿಸಿದವರಿಗೆ
ಅರ್ಥವಾಗುವುದಿಲ್ಲ.
– ರಮಾನಂದ ಶರ್ಮಾ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.