ADVERTISEMENT

ಬುದ್ಧಿ ಕಲಿಸುವುದೂ ಗೊತ್ತಿದೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 20:30 IST
Last Updated 26 ಆಗಸ್ಟ್ 2019, 20:30 IST

ಹನುಮಂತನಂತೆ ಬೆಂಕಿ ಹಚ್ಚೋಕೂ ಬರುತ್ತೆ’ ಎಂದು ಬಿ.ಎಲ್.ಸಂತೋಷ್ ಅವರು ಹಿಂದೂ ಸಮಾಜದ ಗುತ್ತಿಗೆ ಹಿಡಿದವರಂತೆ ಗುಡುಗಿದ್ದಾರೆ (ಪ್ರ.ವಾ., ಆ. 25). ಭಾರತವು ಬಹು ಸಂಸ್ಕೃತಿಯ ನಾಡು, ದೇಶದ ಬಹುತ್ವಕ್ಕೆ ಸಡ್ಡು ಹೊಡೆದಂತೆ ‘ಅಸಂತೋಷಿ’ಗಳು ಆಗಾಗ ಧರ್ಮದ ಕಿಡಿಹಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ.

ಬೆಂಕಿ ಹಚ್ಚುವ ಕಿಡಿಗೇಡಿಗಳಿಗೆ ಬುದ್ಧಿ ಕಲಿಸುವುದೂ ಸೌಹಾರ್ದಪ್ರಿಯರಾದ ಜನರಿಗೆ ಗೊತ್ತಿದೆ ಎಂಬುದನ್ನು ಸಂತೋಷ್‌ ಅವರು ಅರಿಯಲಿ. ಬಹುತ್ವದ ಭಾರತದಲ್ಲಿ ಗಂಗೆ, ಸಾಬರಮತಿ, ಕುತುಬ್ ಮಿನಾರ್, ತಾಜಮಹಲ್‌ ಮುಂತಾದವು ಭಾವೈಕ್ಯದ ಸಂಕೇತಗಳು.

ಇವುಗಳ ಮಧ್ಯೆ ಕಂದಕ ನಿರ್ಮಿಸಿ, ಬೆಂಕಿ ಹಚ್ಚುವವರು ಕರುಣೆ- ಶಾಂತಿಯ ಹಣತೆಗೆ ಸಿಲುಕಿದ ಪತಂಗವಾಗುವರು ಎಂಬುದನ್ನು ಅವರು ಅರಿಯುವುದು ಒಳಿತು.
-ಡಾ. ರುದ್ರೇಶ್ ಅದರಂಗಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.