ADVERTISEMENT

ವಾಚಕರ ವಾಣಿ: ಸಮಾಜ ಸುಧಾರಣೆಯ ಮಾದರಿ ಕಾರ್ಯ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 16:55 IST
Last Updated 3 ಜನವರಿ 2021, 16:55 IST

ಬೆಂಗಳೂರಿನ ಹೆಸರಘಟ್ಟ ಸಮೀಪದ ಶ್ಯಾಮಭಟ್ಟರ ಪಾಳ್ಯದಲ್ಲಿ ಟ್ರಸ್ಟೊಂದರ ವತಿಯಿಂದ ಇತ್ತೀಚೆಗೆ ಗ್ರಾಮಸ್ಥರಿಗೆ ಸಾಹಿತ್ಯದ ಪುಸ್ತಕಗಳನ್ನು ವಿತರಿಸಿರುವುದು ಶ್ಲಾಘನೀಯ ಕಾರ್ಯ. ಪುಸ್ತಕಗಳು ಬದುಕಿಗೆ ಸೂಕ್ತ ಮಾರ್ಗದರ್ಶನ ನೀಡಬಲ್ಲವು. ಇಂತಹ ಮಾದರಿ ಕಾರ್ಯ ಪ್ರತೀ ಹಳ್ಳಿಯಲ್ಲೂ ಆರಂಭವಾಗಬೇಕು. ಶರಣರ ದಾಸೋಹದ ಪಥದಂತೆ ಪುಸ್ತಕ ದಾಸೋಹವು ಶುಭ ಸಮಾರಂಭಗಳಲ್ಲಿ ಉಡುಗೊರೆಯ ರೂಪದಲ್ಲಿ ದೊರೆಯಲಿ. ಧಾರ್ಮಿಕ ಕ್ಷೇತ್ರಗಳಲ್ಲಿ ಪುಸ್ತಕಗಳು ಪ್ರಸಾದದ ರೂಪದಲ್ಲಿ ವಿತರಣೆಯಾಗಲಿ. ಆಗ ಜನರಲ್ಲಿ ಓದುವ ಗೀಳು ತಾನಾಗೇ ಮೂಡುತ್ತದೆ. ಸಭೆ ಸಮಾರಂಭಗಳಲ್ಲಿ ಹಿತಮಿತವಾಗಿ ಆಹಾರ ತಯಾರಿಸಿ, ಆ ಉಳಿತಾಯದ ಮೊತ್ತದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳಿಗೆ ಪುಸ್ತಕಗಳನ್ನು ಖರೀದಿಸಿ ಹಂಚಿದಾಗ ಎಳೆಯ ಮನಗಳಲ್ಲಿ ಓದುವ ಕೌಶಲ ಬೆಳೆಯುತ್ತದೆ.

–ಶಕುಂತಲಾ ಲಕ್ಷ್ಮಣ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT