ADVERTISEMENT

ಬಾಲಕನ ಅತಿಶಯ ಕಾರ್ಯ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 13 ಜನವರಿ 2021, 19:30 IST
Last Updated 13 ಜನವರಿ 2021, 19:30 IST

ಕೋವಿಡ್‌ ಕಾರಣದಿಂದ ಶಾಲಾ ಶುಲ್ಕ ಪಾವತಿಸಲು ಸಾಧ್ಯವಾಗದ 106 ಬಡ ವಿದ್ಯಾರ್ಥಿಗಳ ಶುಲ್ಕವನ್ನು ಬೆಂಗಳೂರಿನಲ್ಲಿ ಓದುತ್ತಿರುವ ನೀಲ್‌ ಪ್ರಕಾಶ್‌ ಎಂಬ ಪಿಯು ವಿದ್ಯಾರ್ಥಿಯು ತನ್ನ ಸ್ನೇಹಿತರು ಹಾಗೂ ಹಿತೈಷಿಗಳಿಂದ ಸಂಗ್ರಹಿಸಿ ಪಾವತಿಸಿರುವ ಸುದ್ದಿಯನ್ನು (ಪ್ರ.ವಾ., ಜ. 13) ಓದಿ ಅಚ್ಚರಿ ಹಾಗೂ ಸಂತೋಷವಾಯಿತು. ಈ ರೀತಿ ಬಡವರ ಸಮಸ್ಯೆಯನ್ನು ಅರ್ಥಮಾಡಿಕೊಂಡು, ತನಗೆ ತಿಳಿದವರಿಂದ ಆರ್ಥಿಕ ಸಹಾಯ ಮಾಡಿಸಿದ ಈ ಬಾಲಕನ ಕಾರ್ಯ ಅತಿಶಯವಾದುದು. ಇಂತಹ ಮಕ್ಕಳೇ ಮುಂದಿನ ಸತ್ಪ್ರಜೆಗಳು. ಪ್ರತಿಯೊಬ್ಬ ಪ್ರಜೆಯೂ ಇದೇ ರೀತಿ ಬಡವರಿಗೆ ಸಹಾಯಹಸ್ತ ಚಾಚಿದರೆ, ಬಡತನ ನಿರ್ಮೂಲವಾಗಿ ನಮ್ಮದು ರಾಮರಾಜ್ಯವಾಗುವುದರಲ್ಲಿ ಸಂದೇಹವೇ ಇರದು. ಎಲ್ಲರಲ್ಲೂ ಇಂತಹ ಮನಃಸ್ಥಿತಿ ವಿಕಸನಗೊಳ್ಳಲಿ.

- ಬಾಲಕೃಷ್ಣ ಎಂ.ಆರ್.,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT