ADVERTISEMENT

ವಾಚಕರ ವಾಣಿ | ಪುಟಿದೇಳುವುದೇ ಬಿಎಸ್‌ಎನ್‌ಎಲ್‌?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 4 ಆಗಸ್ಟ್ 2022, 21:30 IST
Last Updated 4 ಆಗಸ್ಟ್ 2022, 21:30 IST

ಕೇಂದ್ರ ಸರ್ಕಾರವು ಬಿಎಸ್‌ಎನ್‌ಎಲ್ ಪುನಶ್ವೇತನಕ್ಕೆ ₹ 1.64 ಲಕ್ಷ ಕೋಟಿ ಮೊತ್ತದ ಬೃಹತ್‌ ಪ್ಯಾಕೇಜ್‌ ಪ್ರಕಟಿಸಿರುವುದು ಸ್ವಾಗತಾರ್ಹ ಕ್ರಮವಾದರೂ ದೇಕುತ್ತಿರುವ ಈ ಕಂಪನಿ ಎದ್ದು ನಿಲ್ಲಲು ಈ ನೆರವು ಅನುವಾಗಿಸುವುದೇ ಎಂಬುದು ಪ್ರಶ್ನೆ.

ಒಂದು ಕಾಲದಲ್ಲಿ ಗ್ರಾಹಕರ ಅತ್ಯಂತ ನೆಚ್ಚಿನ ಕಂಪನಿಯಾಗಿದ್ದ ಇದು, ಈಗ ನಿಶ್ಶಕ್ತಗೊಂಡಿದೆ. ನೌಕರರಲ್ಲಿನ ಬದ್ಧತೆ ಕೊರತೆ ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದ ನಲುಗಿಹೋಗಿದೆ. ಎಚ್ಎಂಟಿಗೆ ಒದಗಿದ ಗತಿ ಇದಕ್ಕೂ ಬರಬಹುದು ಎಂಬ ಅನುಮಾನ ಇದೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಅಳವಡಿಸಿಕೊಂಡು, ದಕ್ಷತೆ ಹೆಚ್ಚಿಸಿಕೊಂಡರೆ ಪುಟಿದೇಳಬಹುದು. ಆದರೆ ಅದಕ್ಕೆ ಇಚ್ಛಾಶಕ್ತಿ ಬೇಕು.

-ಯಲುವಹಳ್ಳಿ ಸೊಣ್ಣೇಗೌಡ,ಚಿಕ್ಕಬಳ್ಳಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.