ADVERTISEMENT

ಕಾಡಲಿದೆ ಮೇವಿನ ಸಮಸ್ಯೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 19 ಜುಲೈ 2020, 19:30 IST
Last Updated 19 ಜುಲೈ 2020, 19:30 IST

ಮಳೆಗಾಲದಲ್ಲಿ ಕುರಿಗಳ ಮೇವಿನ ಸಮಸ್ಯೆ ತಾರಕಕ್ಕೇರಿ, ಕುರಿಗಾಹಿಗಳು ಸಂಕಷ್ಟಕ್ಕೀಡಾಗುತ್ತಾರೆ. ನಾವು, ಕುರಿಗಳಿಂದ ಉಣ್ಣೆ ಬೇಕು, ಮಾಂಸ ಬೇಕು, ಆದರೆ ಅದರ ಮೇವಿನ ಜವಾಬ್ದಾರಿ ನಮ್ಮದಲ್ಲ ಎಂದರೆ ಹೇಗೆ? ಇದು ಕುರಿಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಮಳೆಗಾಲದಲ್ಲಿ ದನಗಳನ್ನು ಮೇಯಿಸುವುದು ಸಹ ಸಮಸ್ಯೆಯೇ ಆಗಿದೆ. ಈ ಕಾರಣಕ್ಕೆ ಗ್ರಾಮೀಣ ಪ್ರದೇಶದಲ್ಲಿ ಪಶು ಸಂಪತ್ತು ಕ್ಷೀಣಿಸುತ್ತಿದೆ.

ದಶಕಗಳ ಹಿಂದೆ ಗ್ರಾಮೀಣ ಪ್ರದೇಶದ ಕೃಷಿಕರ ಮನೆಗಳಲ್ಲಿ ಹತ್ತಿಪ್ಪತ್ತು ಎತ್ತು, ಎಮ್ಮೆಗಳಿರುತ್ತಿದ್ದವು. ಕುರಿ– ಆಡುಗಳೂ ಇರುತ್ತಿದ್ದವು. ಆಗ ಮೇವಿನ ಕೊರತೆ ಇರಲಿಲ್ಲ. ಗೋಮಾಳಗಳಿದ್ದವು, ಬೆಟ್ಟ ಗುಡ್ಡಗಳಿದ್ದವು. ಸಾರ್ವಜನಿಕ ಗೋಮಾಳಗಳು ಒತ್ತುವರಿಯಾದದ್ದರಿಂದ ಪಶುಸಂಕುಲದ ಬಾಯಿಗೆ ಮಣ್ಣು ಬಿತ್ತು. ಸರ್ಕಾರ ಪಶುಪಾಲಕರ ಸಂಕಷ್ಟಗಳಿಗೆ ಸ್ಪಂದಿಸಿ ಇದಕ್ಕೊಂದು ಶಾಶ್ವತ ಪರಿಹಾರ ರೂಪಿಸಬೇಕು. ಹುಲ್ಲುಗಾವಲಿರುವ ನಿರ್ದಿಷ್ಟ ಪ್ರದೇಶದ ಅರಣ್ಯ ಭೂಮಿಯನ್ನು ಸಾರ್ವಜನಿಕ ಗೋಮಾಳವೆಂದು ಘೋಷಿಸಿ, ಅಲ್ಲಿ ಕುರಿಗಳನ್ನು ಮೇಯಿಸಲು ಅನುವು ಮಾಡಿಕೊಡಬೇಕು. ಬೆಟ್ಟಗುಡ್ಡ ಪ್ರದೇಶದಲ್ಲಿ ಮರಗಳನ್ನು ಬೆಳೆಸುವಂತೆ ಹುಲ್ಲುಗಾವಲು ಪ್ರದೇಶವನ್ನು ಅಭಿವೃದ್ಧಿಪಡಿಸಬೇಕು.

- ವಿರೂಪಾಕ್ಷಪ್ಪ ಕೋರಗಲ್ಲ,ಹಾವೇರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.