ವಿಜಯನಗರ ಜಿಲ್ಲೆ ಉದ್ಘಾಟನೆಗೊಂಡಿದೆ. ಅದೇ ರೀತಿ ಬೆಳಗಾವಿ ಜಿಲ್ಲೆಯೂ ವಿಭಜನೆಗೊಂಡು ಚಿಕ್ಕೋಡಿ ಜಿಲ್ಲೆ ಆಗಬೇಕಿತ್ತು. 16 ತಾಲ್ಲೂಕುಗಳು, 60 ಲಕ್ಷ ಜನಸಂಖ್ಯೆಯನ್ನು ಒಳಗೊಂಡ ಬೆಳಗಾವಿ ಜಿಲ್ಲೆಯ ಆಡಳಿತ ನಿರ್ವಹಣೆ ಕಷ್ಟವಾಗುತ್ತಿದೆ. ಅನೇಕ ಉದ್ದಿಮೆಗಳು, ವಾಣಿಜ್ಯ ಚಟುವಟಿಕೆಗಳು ಬೆಳೆದಿವೆ. ಪ್ರತಿವರ್ಷವೂ ನೆರೆಹಾವಳಿ ಉಪಟಳ ಇದೆ. ಗಡಿ ಸಮಸ್ಯೆ ಇದೆ ಸರಿ, ಆದರೆ ಅದು ಬೇಗ ಇತ್ಯರ್ಥ ಆಗುವಂಥದ್ದಲ್ಲ. ಹೊಸ ಜಿಲ್ಲೆಗಾಗಿ ಇಲ್ಲಿನ ಜನ ಎಲ್ಲಿಯವರೆಗೆ ಕಾಯಬೇಕು?
ಜಿಲ್ಲಾ ಕೇಂದ್ರದಿಂದ ಕೆಲವು ಗ್ರಾಮಗಳು ಇನ್ನೂರು ಕಿ.ಮೀ.ನಷ್ಟು ದೂರ ಇವೆ. ಎಷ್ಟೊಂದು ಚಿಕ್ಕ ಜಿಲ್ಲೆಗಳು ರಚನೆ ಆಗಿರುವಾಗ, ಚಿಕ್ಕೋಡಿ ಇನ್ನೂ ಜಿಲ್ಲೆಯಾಗದಿರುವುದು ಸಮಂಜಸವಲ್ಲ. ಜಿಲ್ಲೆ ಆಗುವ ಎಲ್ಲ ಅರ್ಹತೆಯೂ ಚಿಕ್ಕೋಡಿಗೆ ಇದೆ. ಸರ್ಕಾರ ಶೀಘ್ರದಲ್ಲಿ ಈ ಕುರಿತು ಕ್ರಮ ಕೈಗೊಳ್ಳಬೇಕು.
-ವೆಂಕಟೇಶ ಮಾಚಕನೂರ,ಧಾರವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.