ADVERTISEMENT

ರಂಗನ ಪ್ರಶ್ನಾವಳಿ

ಸುಮಂಗಲಾ
Published 28 ಏಪ್ರಿಲ್ 2019, 18:30 IST
Last Updated 28 ಏಪ್ರಿಲ್ 2019, 18:30 IST
   

ರಂಗನಿಗೆ ಅಗದಿ ಭಯಂಕರ ಕೋಪ ಬಂದಿತು. ಕಾಲೇಜು ಯೂನಿಯನ್ ಅಧ್ಯಕ್ಷನೆಂಬ ಮಕುಟ ಹೊತ್ತು,ಮುಂದೆ ಚುನಾವಣೆಯಲ್ಲಿ ನಿಲ್ಲುವ ಗುರಿಯಿದ್ದರಂಗನಿಗೆ, ಇತಿಹಾಸದಲ್ಲಿಲೆಕ್ಚರರ್ ಬೀರೇಶಿ ಸೊನ್ನೆಯ ಮುಂದೆ ಒಂದನ್ನು ದಯಪಾಲಿಸಿದರೆ ಕಂಡಾಪಟ್ಟೆ ಕೋಪ ಬಾರದಿದ್ದೀತೆ? ಹಗ್ಗ ಕಿತ್ತ ಗೂಳಿಯಂತೆಸ್ಟಾಫ್ ರೂಮಿಗೆನುಗ್ಗಿದರಂಗ, ಏಕಾಂಗಿಯಾಗಿ ಕುಳಿತಿದ್ದ ಬೀರೇಶಿಯ ಎದುರು ನಿಂತ. ಜೇಬಿಗೆ ಕೈಹಾಕಿ ಏನೋ ತೆಗೆದ. ಚಾಕು ತೆಗೆದನೇನೋ ಎಂದು ಬೀರೇಶಿ ಹೆದರಿ ಕಣ್ಮುಚ್ಚಿಬಿಟ್ಟ.

‘ಕಣ್ಬುಡಿ ಸಾ... ಅದೇನ್ ಹಂಗ್ ಹೆದ್ರಿಕಂಡೀರ...ಅಷ್ಟುಉದ್ದುದ್ದ ಉತ್ತರಕ್ಕೆಒಂದಂಕಕೊಟ್ಟೀರಲ್ಲ, ಇತಿಹಾಸ ತಗಂಡ್ ಏನ್ ಕಡೀತೀರಾ? ಕರೆಂಟ್ ಅಫೇರ್ಸ್ ಗೊತ್ತಿರಬೇಕು. ಈಐದಕ್ಕೆಉತ್ತರ ಬರೆದುಬುಡಿ ನೋಡಾಮು’ ಎಂದವನೇಪೇಪರನ್ನು ಬೀರೇಶಿಯ ಮುಂದೆ ಹಿಡಿದ.

*ಬಾಲ ನರೇಂದ್ರ ಬಾಲ್ಯದಲ್ಲಿ ರೈತರ ಹೊಲ ದಿಂದ ಕೇಳಿ ತಿಂದ ಮಾವಿನಹಣ್ಣುಗಳ ಸಂಖ್ಯೆ ಎಷ್ಟು?ಅಂದು ಮಾವಿನಹಣ್ಣುಗಳನ್ನು ತಿಂದ ಬಾಲ ನರೇಂದ್ರ ಪ್ರಧಾನ ಸೇವಕರಾದರೆ,ಅವನ್ನು ಬೆಳೆಯುತ್ತಿದ್ದ ಆ ರೈತರು ಇಂದು ಏನಾಗಿದ್ದಾರೆ?

ADVERTISEMENT

* ಮಮತಕ್ಕ ಈವರೆಗೆ ನರೇಂದ್ರಣ್ಣನಿಗೆಯಾವ್ಯಾವ ಬಣ್ಣದ ಕುರ್ತಾಕಳಿಸಿದ್ದಾರೆ?ಅರ್ಧ ತೋಳಿನವು ಮತ್ತು ತುಂಬು ತೋಳಿನವು ಎಷ್ಟು?

* ವಾರಾಣಸಿಯಲ್ಲಿ ನಮೋ ರೋಡ್‍ಶೋಗೆ ರಸ್ತೆ ತೊಳೆಯಲು ಬಳಸಿದ1.4ಲಕ್ಷ ಲೀಟರ್ ನೀರನ್ನು ನಲ್ಲಿ ನೀರು ಸೌಲಭ್ಯವಿಲ್ಲದ ಶೇ 30ರಷ್ಟು ಜನರು ಎಷ್ಟು ದಿನ ಬಳಸಬಹುದಿತ್ತು?ಈ ನೀರಿನ ವೆಚ್ಚವನ್ನು ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಬೇಕೇ,ಬೇಡವೇ?

* ‘ನಮೋ ಸಂದರ್ಶನಕಾರ’ರಾಗಲು ಏನು ಅರ್ಹತೆಗಳಿರಬೇಕು?

* ಐದು ವರ್ಷಗಳಲ್ಲಿ ಪ್ರಧಾನ ಸೇವಕರು ಯಾವ್ಯಾವ ಬಣ್ಣದ,ಒಟ್ಟು ಎಷ್ಟು ಬಗೆಯ ರುಮಾಲು ಸುತ್ತಿದ್ದಾರೆ?

ಪ್ರಶ್ನಾವಳಿ ಓದಿಬೀರೇಶಿ ಬೆವರೊರೆಸಿ ಕೊಂಡ. ‘ಸರಿಯುತ್ತರ ಬರೆದಮ್ಯಾಗೆ ಹೇಳಿ ಸಾ...’ ಎನ್ನುತ್ತ ಹೊರಹೋದರಂಗ, ಬಾಗಿಲು ಮುಚ್ಚಿ ಹೊರಗಿಂದಚಿಲಕ ಜಡಿದ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.