ADVERTISEMENT

ಶುಚಿತ್ವ ಕಾಪಾಡುವ ಕರ್ತವ್ಯ ಪಾಲನೆಯಾಗಲಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 19:39 IST
Last Updated 20 ಸೆಪ್ಟೆಂಬರ್ 2019, 19:39 IST

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಪಕ್ಕದಲ್ಲಿರುವ ಬಸ್ ನಿಲ್ದಾಣದ ಎದುರಿಗಿನ ‘ಪ್ರವಾಸಿ ಟ್ರ್ಯಾಕ್ಸ್ ಮತ್ತು ಸುಮೋ ನಿಲ್ದಾಣ’ವು ಓಡಾಡಿದವರಿಗೆಲ್ಲಾ ಅಸಹ್ಯವಾಗುವ ಸ್ಥಿತಿಯಲ್ಲಿದೆ. ಎಲ್ಲಿ ನೋಡಿದರೂ ಜನರು ಮಲ, ಮೂತ್ರ ವಿಸರ್ಜಿಸಿ ಗಲೀಜು ಮಾಡುತ್ತಿರುವುದು ಕಂಡು ಬರುತ್ತದೆ. ಆದರೆ ಕೆಲವು ಹಳ್ಳಿಗಳಿಗೆ ಹೋಗಿ ಬರುವ ಪ‍್ರಯಾಣಿಕರು ಅನಿವಾರ್ಯವಾಗಿ ಅಲ್ಲಿನ ಕಲ್ಲು ಬೆಂಚಿನ ಮೇಲೆ ಕುಳಿತುಕೊಂಡು, ಗಲೀಜನ್ನು ತುಳಿದುಕೊಂಡೇ ಬಸ್ಸು ಹತ್ತಿ ಪ್ರಯಾಣಿಸುತ್ತಿರುವುದನ್ನು ನೋಡಲು ಅಸಹ್ಯವಾಗುತ್ತದೆ.

ಇದರಿಂದ ಜನರಿಗೆ ಹಲವು ರೀತಿಯ ಕಾಯಿಲೆಗಳು ಹರಡುವುದರಿಂದ ಸರ್ಕಾರವು ಇಲ್ಲಿ ಗಲೀಜು ಮಾಡುವುದನ್ನು ತಡೆಯಬೇಕು. ಶುಚಿತ್ವ ಕಾಪಾಡುವ ಮಾರ್ಗೋಪಾಯಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಅನುಸರಿಸುವಂತೆ ನೋಡಿಕೊಳ್ಳಬೇಕಾದುದು ಮೇಲಧಿಕಾರಿಗಳ ಆದ್ಯ ಕರ್ತವ್ಯವಾಗಿರುತ್ತದೆ. ಶುಚಿತ್ವವನ್ನು ಅನುಸರಿಸುವುದು ಸಾರ್ವಜನಿಕರ ಕರ್ತವ್ಯ ಸಹ ಎಂಬುದನ್ನು ನಾವೆಲ್ಲ ಮರೆಯಬಾರದು.

- ಕಡಿದಾಳು ಶಾಮಣ್ಣ,ಭಗವತೀಕೆರೆ,ಭದ್ರಾವತಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.