ADVERTISEMENT

ವಾಚಕರ ವಾಣಿ| ಸ್ವಚ್ಛತೆ ಕಾಯಲಿ

​ಪ್ರಜಾವಾಣಿ ವಾರ್ತೆ
Published 19 ಮೇ 2020, 20:15 IST
Last Updated 19 ಮೇ 2020, 20:15 IST

ಲಾಕ್‌ಡೌನ್‌ ಸಡಿಲಿಕೆಯ ನಂತರ ಬೀದಿಬದಿ ವ್ಯಾಪಾರಕ್ಕೆ ಅನುಮತಿ ನೀಡಿರುವುದು ಸರಿಯಲ್ಲ. ಇದರಿಂದ ಫಾಸ್ಟ್‌ಫುಡ್ ಮಾರಾಟವೂ ಶುರುವಾಗುತ್ತದೆ. ಸಾಮಾನ್ಯವಾಗಿ ಬೀದಿಬದಿಯ ಬಹಳಷ್ಟು ಹೋಟೆಲ್‌ಗಳಲ್ಲಿ ಹಣ ಪಡೆಯುವವರು ಮತ್ತು ತಿಂಡಿ ಹಾಕಿಕೊಡುವವರು ಒಬ್ಬರೇ ಆಗಿರುತ್ತಾರೆ. ಹೀಗಾದಾಗ ಸ್ವಚ್ಛತೆ ಇಲ್ಲವಾಗಿ, ಗ್ರಾಹಕರು ಕೊರೊನಾ ಸೋಂಕಿಗೆ ತುತ್ತಾಗುವ ಸಂಭವ ಇರುತ್ತದೆ. ನೋಟುಗಳು ರೋಗವಾಹಕಗಳೆಂಬುದು ಈಗಾಗಲೇ ಸಾಬೀತಾಗಿರುವ ಸಂಗತಿ. ಆದ್ದರಿಂದ ನೋಟುಗಳಿಂದ ಹರಡಬಹು
ದಾದ ರೋಗಗಳಿಂದ ಜನರನ್ನು ಕಾಪಾಡಬೇಕಾದರೆ ಫಾಸ್ಟ್‌ಫುಡ್ ಮಾರಾಟಗಾರರು, ಬೀದಿ ಬದಿಯ ಹೋಟೆಲ್‌ಗಳು, ಬೇಕರಿಗಳಲ್ಲಿ ಹಣ ಪಡೆಯುವವರು ತಿಂಡಿ ತಿನಿಸು ಹಾಕಿಕೊಡುವುದನ್ನು ನಿರ್ಬಂಧಿಸಬೇಕು ಮತ್ತು ತಿಂಡಿ ಹಾಕಿಕೊಡಲು ಪ್ರತ್ಯೇಕ ಸಿಬ್ಬಂದಿ ಇರುವಂತೆ ನೋಡಿಕೊಂಡು ಜನರ ಆರೋಗ್ಯವನ್ನು ಕಾಪಾಡಬೇಕಾಗಿದೆ.

-ರಾಜಶೇಖರಮೂರ್ತಿ,ಬೆಳಗನಹಳ್ಳಿ, ಎಚ್.ಡಿ.ಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT