ADVERTISEMENT

ವಾಸ್ತವ ಅರಿತರೆ...

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 19:45 IST
Last Updated 2 ಏಪ್ರಿಲ್ 2020, 19:45 IST

ಪ್ರಕೃತಿಯಲ್ಲಿನ ಎಲ್ಲ ಬಗೆಯ ಜಡವಸ್ತುಗಳು ಮತ್ತು ಜೀವಿಗಳು ಸೂಕ್ಷ್ಮವಾದ ಅಣು ಅಥವಾ ಪರಮಾಣುಗಳಿಂದ ಹುಟ್ಟಿಬಂದಿವೆ. ಪ್ರಪಂಚದಲ್ಲಿ ನಡೆಯುವ ಘಟನೆಗಳಿಗೆ ಪ್ರಕೃತಿಯಲ್ಲಿ ಉಂಟಾಗುವ ಆಗುಹೋಗುಗಳು ಮತ್ತು ಮಾನವ ಜೀವಿಗಳ ನಡೆನುಡಿಗಳೇ ಕಾರಣ ಎನ್ನುತ್ತದೆ ಭೌತವಾದ. ಪ್ರಪಂಚದಲ್ಲಿನ ಎಲ್ಲಾ ಬಗೆಯ ಒಳಿತು ಕೆಡುಕುಗಳಿಗೆ ದೇವರೇ ಕಾರಣ. ಪ್ರಪಂಚದ ಆಗುಹೋಗುಗಳನ್ನು ನಿಯಂತ್ರಿಸುವ ಮತ್ತು ನಿರ್ದೇಶಿಸುವ ಸರ್ವಶಕ್ತನೇ ದೇವರು ಎನ್ನುತ್ತದೆ ದೇವತಾವಾದ.

ಇದೀಗ ಇಡೀ ಪ್ರಪಂಚದಲ್ಲಿ ಜನಸಮುದಾಯದ ಬದುಕು ಅಸ್ತವ್ಯಸ್ತಗೊಂಡು, ಅಪಾರ ಸಂಖ್ಯೆಯ ಸಾವು ನೋವಿಗೆ ಕಾರಣವಾಗುತ್ತಿರುವುದು, ಪ್ರಕೃತಿಯ ಜೀವಿಗಳ ಒಡಲಿನಿಂದ ಹುಟ್ಟಿ ಬಂದಿರುವ ಕೊರೊನಾ ಎಂಬ ಅಣು. ಈ ಸಂದರ್ಭದಲ್ಲಿ ಉಂಟಾಗಿರುವ ಸಾವಿರಾರು ಬಗೆಯ ಸಮಸ್ಯೆಗಳಿಗೆ ಮಾನವರೇ ಪರಿಹಾರ ಕಂಡುಕೊಳ್ಳಲು ಹೆಣಗುತ್ತಿದ್ದಾರೆ. ಈ ವಾಸ್ತವವನ್ನು ನಾವು ಅರಿತರೆ, ಮಾನವ ಸಮುದಾಯದ ಬದುಕಿನ ಏರಿಳಿತಗಳಿಗೆ ಪ್ರಕೃತಿ ಮತ್ತು ಮಾನವರ ನಡೆನುಡಿಗಳು ಮುಖ್ಯವೇ ಹೊರತು, ದೇವರ ಪಾತ್ರವೇನಿಲ್ಲ ಎಂಬುದು ಮನದಟ್ಟಾಗುತ್ತದೆ.

-ಸಿ.ಪಿ.ನಾಗರಾಜ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.