ADVERTISEMENT

ನಾಲ್ಕೂವರೆ ಗಂಟೆಗಳಲ್ಲಿ 350 ಕಿ.ಮೀ. ಕ್ರಮಿಸಿದ ‘ಜೀವರಕ್ಷಕ’ ಅಭಿನಂದನಾರ್ಹ

ವೃತ್ತಿ ಭದ್ರತೆ ಸಿಗಲಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 3:00 IST
Last Updated 10 ಫೆಬ್ರುವರಿ 2020, 3:00 IST
ನಾಲ್ಕೂವರೆ ಗಂಟೆಗಳಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಬಂದ ಆಂಬುಲೆನ್ಸ್
ನಾಲ್ಕೂವರೆ ಗಂಟೆಗಳಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಬಂದ ಆಂಬುಲೆನ್ಸ್   

ಹೃದಯಸಂಬಂಧಿ ತೊಂದರೆಯಿಂದ ಬಳಲುತ್ತಿದ್ದ 40 ದಿನದ ಮಗುವನ್ನು ಇತ್ತೀಚೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನಿಂದ ಝೀರೊ ಟ್ರಾಫಿಕ್‌ ವ್ಯವಸ್ಥೆಯಲ್ಲಿ ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆದೊಯ್ದ ಹನೀಫ್ ಎಂಬ ಚಾಲಕರ ಕರ್ತವ್ಯಪ್ರಜ್ಞೆ ಒಂದೆಡೆಯಾದರೆ, ದೂರದ ಬೆಂಗಳೂರಿನವರೆಗೂ ಆಂಬುಲೆನ್ಸ್‌ನ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಟ್ಟ ಪೊಲೀಸರ ವೃತ್ತಿಪರತೆ ಮತ್ತೊಂದೆಡೆ. ಇವರೆಲ್ಲರೂ ಅಭಿನಂದನಾರ್ಹರು.

ಸಂಕಷ್ಟದ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಪರರ ಜೀವವನ್ನು ಉಳಿಸುವ ಹನೀಫ್‌ ಅವರಂತಹ ಆಂಬುಲೆನ್ಸ್ ಚಾಲಕರು ಮತ್ತು ಈಜುಗಾರರು ಇದ್ದಾರಾದರೂ ಅವರು ಬಹುತೇಕ ತೆರೆಮರೆಯಲ್ಲಿಯೇ ಇರುತ್ತಾರೆ. ಅಂತಹವರ ಕಾರ್ಯವನ್ನು ಗುರುತಿಸಿ ಗೌರವಿಸಬೇಕಾಗಿದೆ. ಇಂತಹ ಜೀವರಕ್ಷಕರಿಗೆ ಸರ್ಕಾರವು ಸೇವಾ ಭದ್ರತೆಯನ್ನು ಒದಗಿಸಬೇಕಾಗಿದೆ.

ADVERTISEMENT

ಆದರ್ಶ್ ಶೆಟ್ಟಿ ಕಜೆಕ್ಕಾರ್,ಉಪ್ಪಿನಂಗಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.