ADVERTISEMENT

ಕಾಂಗ್ರೆಸ್‌ ಇನ್ನಾದರೂ ಎಚ್ಚೆತ್ತುಕೊಳ್ಳಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 4 ಜುಲೈ 2022, 19:30 IST
Last Updated 4 ಜುಲೈ 2022, 19:30 IST

ವಿರೋಧ ಪಕ್ಷಗಳ ಆಡಳಿತ ಇರುವ ರಾಜ್ಯಸರ್ಕಾರಗಳನ್ನು ಉರುಳಿಸುವ ಆಟದಲ್ಲಿ ಬಿಜೆಪಿ ತೊಡಗಿದೆ. ಇದು, ಅತಿ ಎನಿಸುವ ಮಟ್ಟಿಗೆ ಹೋಗಿದೆ. ಆದರೆ, ನಮ್ಮ ರಾಜ್ಯದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರು, ಚುನಾವಣೆಯಲ್ಲಿ ಜನ ತಮ್ಮ ಪಕ್ಷವನ್ನು ಬಹುಮತದಿಂದ ಆರಿಸಿಯೇ ಬಿಟ್ಟಿದ್ದಾರೆ ಎಂದು ಭ್ರಮಿಸಿ, ಮುಖ್ಯಮಂತ್ರಿಯ ಕುರ್ಚಿಗಾಗಿ ‘ಶೀತಲ ಸಮರ’ದಲ್ಲಿ ಮಗ್ನರಾಗಿದ್ದಾರೆ. ಕಾಂಗ್ರೆಸ್‌ ಹೈಕಮಾಂಡ್‌ಗೆ ಇದರ ಪರಿವೆಯೇ ಇದ್ದಂತಿಲ್ಲ. 23 ಮಂದಿಯ ಭಿನ್ನಮತೀಯರ ಗುಂಪು ನಿತ್ರಾಣವಾದ ನಂತರ, ‘ಪಿತ್ರಾರ್ಜಿತ ಆಸ್ತಿಯಾದ ಕಾಂಗ್ರೆಸ್ ನಮ್ಮ ಹಿಡಿತಕ್ಕೇ ದಕ್ಕಿದೆ’ ಎಂದು ನಿರುಮ್ಮಳವಾಗಿ ಇದೆ.

ಬಿಜೆಪಿ ನಾಯಕರು ವಿರೋಧಿಗಳ ಬುಡವನ್ನೇ ಅಲ್ಲಾಡಿಸುತ್ತಿದ್ದಾರೆ. ಅಧಿಕಾರ ಕಸಿದುಕೊಳ್ಳಲು ಅವಕಾಶಕ್ಕಾಗಿ ಕಾಯತೊಡಗಿದ್ದಾರೆ. ಆದರೆ ಕಾಂಗ್ರೆಸ್‌ ಮುಖಂಡರು ಕುರ್ಚಿಗಾಗಿ ಈಗಲೇ ಒಳಜಗಳದಲ್ಲಿ ನಿರತರಾಗಿದ್ದಾರೆ. ದಿಗ್ಗಜರಿಂದ ರಾರಾಜಿಸುತ್ತಿದ್ದ ಪಕ್ಷ ಈಗ ಈ ಮಟ್ಟಕ್ಕೆ ಇಳಿದಿರುವುದು ದುರಂತ. ಈ ಪಕ್ಷ ಇನ್ನಾದರೂ
ಎಚ್ಚೆತ್ತುಕೊಳ್ಳಲಿ.

- ಸ್ವಾಮಿ ಕೇಶವ್ ಜಿ.ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.