‘ಕುದುರೆ ವ್ಯಾಪಾರಕ್ಕೆ ಹೋಗಿದ್ದೆ, ಬಿಜೆಪಿ ಸೇರಲು ಅಲ್ಲ’ ಎಂಬ ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಅವರ ಹೇಳಿಕೆ ನೋಡಿ (ಪ್ರ.ವಾ., ಅ. 9), ಮತ್ತೆ ಶುರುವಾಯಿತೇನೋ ‘ಕುದುರೆ ವ್ಯಾಪಾರ’?! ಎನಿಸಿ ಒಮ್ಮೆ ದಿಗಿಲಾಯಿತು. ಆದರೆ ಅವು ಪಕ್ಷದಿಂದ ಪಕ್ಷಕ್ಕೆ ಓಡುವ ಕುದುರೆಗಳಲ್ಲ ಎಂದು ತಿಳಿದು ಸಮಾಧಾನವಾಯಿತು. ಯಾಕೆಂದರೆ, ಎಲ್ಲಾ ರೀತಿಯ ಕುದುರೆ ವ್ಯಾಪಾರದಲ್ಲೂ ನಮ್ಮ ರಾಜಕಾರಣಿಗಳು ನಿಸ್ಸೀಮರಲ್ಲವೇ?!
– ಆರ್.ಟಿ.ವೆಂಕಟೇಶ್ ಬಾಬು, ತುಮಕೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.