ADVERTISEMENT

ಹಣದುಬ್ಬರ ನಿಯಂತ್ರಣ ಅವಶ್ಯಕ

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 18:01 IST
Last Updated 2 ಜೂನ್ 2021, 18:01 IST

ಕೊರೊನಾ ಸೋಂಕಿನಿಂದ ದೇಶದೆಲ್ಲೆಡೆ ಅನಾರೋಗ್ಯ, ಲಾಕ್‌ಡೌನ್, ನಿರುದ್ಯೋಗ, ವೇತನ ಕುಸಿತ, ಬೇಡಿಕೆಯಲ್ಲಿನ ಕೊರತೆ, ತಗ್ಗಿದ ಹೂಡಿಕೆಯಂತಹ ಕಾರಣಗಳಿಂದ ಎಲ್ಲಾ ಬಗೆಯ ಆರ್ಥಿಕ ಚಟುವಟಿಕೆಗಳು ಕುಸಿಯುತ್ತಿವೆ. ಇಂತಹ ಸಂದರ್ಭದಲ್ಲಿ ಸರ್ಕಾರವು ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೆಚ್ಚಿಸುವುದರ ಜೊತೆಗೆ ಸರ್ಕಾರಿ ಹೂಡಿಕೆಯನ್ನು ಹೆಚ್ಚಿಸಲು ಗಮನ ನೀಡಬೇಕು. ಅಲ್ಲದೆ, ದೇಶದಲ್ಲಿ ಹಣದ ಚಲಾವಣೆಗೆ ಕೇಂದ್ರ ಬ್ಯಾಂಕ್‌ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.

ದಿನದಿಂದ ದಿನಕ್ಕೆ ಏರುತ್ತಿರುವ ತೈಲ ಬೆಲೆಯು ಆರ್ಥಿಕತೆಯಲ್ಲಿ ಅಗತ್ಯ ಸರಕುಗಳ ಬೆಲೆ ಹೆಚ್ಚಿಸುವುದರೊಂದಿಗೆ ಹಣದುಬ್ಬರವನ್ನು ಸೃಷ್ಟಿಸುತ್ತಿದೆ. ಇದು ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ತಗ್ಗಿಸುತ್ತದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೈಲ ಬೆಲೆಯಲ್ಲಿ ಸ್ಥಿರತೆಯನ್ನು ತರದೇ ಹೋದರೆ ಆರ್ಥಿಕ ಪುನಶ್ಚೇತನಕ್ಕೆ ಹಣದುಬ್ಬರ ದೊಡ್ಡ
ಮಾರಕವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT