ADVERTISEMENT

ಯುವ ವೈದ್ಯೆಯ ದಿಟ್ಟ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 19:45 IST
Last Updated 3 ಏಪ್ರಿಲ್ 2020, 19:45 IST

ಕೊರೊನಾ ವೈರಸ್ ತನ್ನ ಕರಾಳ ಛಾಯೆಯಿಂದ ಎಲ್ಲೆಡೆ ಆತಂಕ ಸೃಷ್ಟಿಸಿದ್ದರೆ, ಇನ್ನೇನು ಹಸೆಮಣೆ ಏರಲು ಅಣಿಯಾಗಬೇಕಾಗಿದ್ದ ಯುವ ವೈದ್ಯೆಯೊಬ್ಬರು ತಮ್ಮ ಮದುವೆಯನ್ನು ಮುಂದೂಡಿ, ಕೊರೊನಾ ಸೋಂಕುಪೀಡಿತರ ಸೇವೆಗೆ ಮುಂದಾಗಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕೇರಳದ ಕಣ್ಣೂರಿನ ಮೆಡಿಕಲ್ ಕಾಲೇಜಿನಲ್ಲಿ ವೈದ್ಯೆಯಾಗಿರುವ ಡಾ. ಶಿಫಾ ಮೊಹಮ್ಮದ್ ಅವರಿಗೆ ದುಬೈ ಮೂಲದ ಉದ್ಯಮಿಯೊಂದಿಗೆ ಮಾರ್ಚ್ 29ರಂದು ವಿವಾಹ ನಿಶ್ಚಯವಾಗಿತ್ತು. ಆದರೆ ಕೇರಳದಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದ್ದಂತೆಯೇ ಶಿಫಾ ತಮ್ಮ ವಿವಾಹವನ್ನು ಮುಂದೂಡುವ ನಿರ್ಧಾರ ಕೈಗೊಂಡರು. ಇದಕ್ಕೆ ಅವರ ಭಾವಿ ಪತಿ ಹಾಗೂ ಕುಟುಂಬ ವರ್ಗದವರೂ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ. ಕೆಲವೆಡೆ ಸೋಂಕುಪೀಡಿತರಿಗೆ ಚಿಕಿತ್ಸೆ ನೀಡಲು ಸ್ವತಃ ವೈದ್ಯರೇ ಹಿಂಜರಿಯುತ್ತಿದ್ದಾರೆಂಬ ವರದಿಗಳಿವೆ. ಇದರ ನಡುವೆ, ಯುವ ವೈದ್ಯೆಯ ದಿಟ್ಟ ನಿರ್ಧಾರ ಅಭಿನಂದನಾರ್ಹವಾಗಿದ್ದು, ವೈದ್ಯವೃತ್ತಿಯ ಘನತೆಯನ್ನು ಹೆಚ್ಚಿಸುವಂತಿದೆ.

–ಕೆ.ವಿ.ವಾಸು, ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.