ADVERTISEMENT

ವೈರಸ್‌ ಭೀತಿಯಲ್ಲಿ ಮರೆಯಾಯಿತೇ ದುರ್ಘಟನೆ?

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 19:45 IST
Last Updated 30 ಮಾರ್ಚ್ 2020, 19:45 IST

ಧಾರವಾಡದಲ್ಲಿ ವಾಣಿಜ್ಯ ಸಂಕೀರ್ಣದ ಕಟ್ಟಡ ನೆಲಸಮವಾಗಿ ಇತ್ತೀಚೆಗೆ ಒಂದು ವರ್ಷ ಪೂರ್ತಿಗೊಂಡಿದೆ. ಕೊರೊನಾ ವೈರಸ್‌ನ ಭೀತಿಯಲ್ಲಿರುವ ಜನ, ಈ ದುರ್ಘಟನೆಯಲ್ಲಿ ಮಡಿದವರನ್ನು ಮರೆತಿದ್ದಾರೆ. ಅಂದಿನ ಘಟನೆಯಲ್ಲಿ ಹತ್ತಾರು ಜನ ಪ್ರಾಣ ಕಳೆದುಕೊಂಡು, ಬಹಳಷ್ಟು ಮಂದಿ ಅಂಗವಿಕಲರಾಗಿದ್ದಾರೆ. ಸತ್ತವರ ಕುಟುಂಬಕ್ಕೆ, ಗಾಯಾಳುಗಳಿಗೆ ಸರ್ಕಾರ ಹಾಗೂ ಸ್ಥಳೀಯ ಆಡಳಿತ ಒಂದಿಷ್ಟು ಪರಿಹಾರ ಕೊಟ್ಟು ಕೈತೊಳೆದುಕೊಂಡಿವೆ.

ದುರ್ಘಟನೆಗೆ ಕಾರಣರಾದವರು ಜಾಮೀನಿನ ಮೇಲೆ ಹೊರಬಂದು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಬೆಟ್ಟದಷ್ಟು ಭರವಸೆ ನೀಡಿದ್ದ ಸ್ಥಳೀಯ ಜನಪ್ರತಿನಿಧಿಗಳು, ಈ ಒಂದು ವರ್ಷದಲ್ಲಿ ಒಮ್ಮೆಯೂ ಈ ವಿಷಯವಾಗಿ ಸದನದಲ್ಲಿ ಪ್ರಶ್ನೆ ಎತ್ತಿ, ನೊಂದವರಿಗೆ ಸೂಕ್ತ ಪರಿಹಾರ ಒದಗಿಸುವ ಪ್ರಯತ್ನ ನಡೆಸಿಲ್ಲ. ಈ ದಿಸೆಯಲ್ಲಿ ಈಗಲಾದರೂ ಅವರು ಗಂಭೀರವಾಗಿ ಪ್ರಯತ್ನಿಸಬೇಕು.

-ಗಂಗಾಧರ ಅಂಕೋಲೆಕರ, ಧಾರವಾಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.