ADVERTISEMENT

ಪತಿ, ಪತ್ನಿ ಮತ್ತು ಹೆಲಿಕಾಪ್ಟರ್

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 18:53 IST
Last Updated 5 ಸೆಪ್ಟೆಂಬರ್ 2019, 18:53 IST

ರಾಜಸ್ಥಾನದ ಶಿಕ್ಷಕರೊಬ್ಬರು ಇತ್ತೀಚೆಗೆ ನಿವೃತ್ತಿಯಾದ ದಿನ, ಶಾಲೆಯಿಂದ ತಮ್ಮ ಗ್ರಾಮಕ್ಕೆ ಬರೋಬ್ಬರಿ ₹ 3.70 ಲಕ್ಷ ಪಾವತಿಸಿ ಒಂದು ಹೆಲಿಕಾಪ್ಟರನ್ನು ಬಾಡಿಗೆಗೆ ಪಡೆದು, ಪತ್ನಿ ಸಮೇತ ಪ್ರಯಾಣಿಸಿ ಆ ದಿನವನ್ನು ಅವಿಸ್ಮರಣೀಯ ಆಗಿಸಿಕೊಂಡರು ಎಂದು ವರದಿಯಾಗಿದೆ (ಪ್ರ.ವಾ., ಸೆ. 2).

ಶಿಕ್ಷಕನ ಮುಖ್ಯ ಉದ್ದೇಶ ಪತ್ನಿಯ ಆಸೆ ತೀರಿಸುವುದಾಗಿತ್ತು. ಮೇಲ್ನೋಟಕ್ಕೆ ಇದರಲ್ಲೇನೂ ತಪ್ಪಿಲ್ಲ ಎಂದು ಭಾವಿಸಿದರೂ, ಕೇವಲ 18 ನಿಮಿಷಗಳ ಪ್ರಯಾಣಕ್ಕೆ ಇಷ್ಟೊಂದು ಭಾರಿ ಮೊತ್ತ ಪಾವತಿಸಿ ಹೆಲಿಕಾಪ್ಟರನ್ನು ಬಾಡಿಗೆಗೆ ಪಡೆಯುವ ಅಗತ್ಯವಾದರೂ ಏನಿತ್ತು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದರಲ್ಲೂ ಆ ನೌಕರ, ಕೇವಲ ಸಂಬಳದಲ್ಲಿ ಬದುಕು ಸವೆಸಿದ ಒಬ್ಬ ಶಿಕ್ಷಕ ಎಂಬುದನ್ನು ಗಮನಿಸಬೇಕು.

ಯಾವುದೇ ವಾಹನ ಇರುವುದು ಒಂದೆಡೆಯಿಂದ ಮತ್ತೊಂದೆಡೆಗೆ ಪ್ರಯಾಣಿಸುವ ಸೌಲಭ್ಯಕ್ಕಾಗಿಯೇ ವಿನಾ ಸಂಭ್ರಮಿಸುವುದಕ್ಕಲ್ಲ. ಇವುಗಳಲ್ಲಿ ಪ್ರಯಾಣಿಸಿದ ಮಾತ್ರಕ್ಕೆ ಆ ದಿನ ಅವಿಸ್ಮರಣೀಯ ಆಗಬೇಕಿಲ್ಲ. ಮಧ್ಯಮ ವರ್ಗದ ಜನ ಇಂಥ ಭ್ರಮೆಗಳಿಂದ ಹೊರಬರಬೇಕಿದೆ. ಸಮಾಜಕ್ಕೆ ಮಾದರಿಯಾಗಿ ಇರಬೇಕಾದ ಹಾಗೂ ಸರಳ ಜೀವನಕ್ರಮವನ್ನು ಮಕ್ಕಳಿಗೆ ಬೋಧಿಸಬೇಕಾದ ಶಿಕ್ಷಕನೇ ಈ ರೀತಿ ದುಂದುವೆಚ್ಚ ಮಾಡಿರುವುದು ಸಮರ್ಥನೀಯವಲ್ಲ.

ADVERTISEMENT

ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.