ADVERTISEMENT

ಲಸಿಕೆ ನಿರ್ವಹಣೆ ಸಮರ್ಪಕವಾಗಲಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 19:30 IST
Last Updated 1 ಜೂನ್ 2021, 19:30 IST

ದೇಶದಲ್ಲಿ ಕೋವಿಡ್ ಲಸಿಕೆ ಅಗತ್ಯ ಪ್ರಮಾಣದಲ್ಲಿ ಲಭ್ಯವಿಲ್ಲದೆ ಜನ ಆಸ್ಪತ್ರೆಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ಪರದಾಡುತ್ತಿದ್ದಾರೆ. ಈಗಾಗಲೇ ಮೊದಲ ಡೋಸ್ ಪಡೆದವರ ಮೊಬೈಲ್ ಫೋನಿಗೆ ಎರಡನೇ ಡೋಸ್ ಪಡೆಯುವಂತೆ ಸಂದೇಶ ಬರುವ ಕಾರಣ, ಬಹಳಷ್ಟು ಮಂದಿ ಆ ದಿನ ತಮ್ಮ ಕೆಲಸಗಳನ್ನು ಬಿಟ್ಟು ಆಸ್ಪತ್ರೆಗಳಿಗೆ ತೆರಳುತ್ತಾರೆ. ಆದರೆ ಅಲ್ಲಿ ಲಸಿಕೆ ಲಭ್ಯ ಇರುವುದಿಲ್ಲ. ಆಗ ಸಿಬ್ಬಂದಿ ಜೊತೆ ಜಗಳ ಮಾಡಿ ಅವರನ್ನು ಶಪಿಸುತ್ತಾ ಹೈರಾಣಾಗಿ ವಾಪಸಾಗುತ್ತಾರೆ.ಮತ್ತೆ ಯಾವಾಗ ಹೋಗಬೇಕು ಎನ್ನುವ ಗೊಂದಲ ಮೂಡುತ್ತದೆ. ಇದರಿಂದ ಲಸಿಕೆಯ ಲಭ್ಯತೆ ಮತ್ತು ಫಲಾನುಭವಿಗಳ ಸರದಿ ಬಗ್ಗೆ ತಂತ್ರಾಂಶದಲ್ಲಿ ದಾಖಲೀಕರಣ ಹಾಗೂ ನಿರ್ವಹಣೆ ಸಮರ್ಪಕವಾಗಿ ಇಲ್ಲವೆಂಬುದು ತಿಳಿಯುತ್ತಿದೆ.

ಉದಾಹರಣೆಗೆ, ನಾನು, ನನ್ನ ಪತ್ನಿ ಈಗಾಗಲೇ ಎರಡೂ ಡೋಸ್‌ ಲಸಿಕೆಯನ್ನು ಪಡೆದಿದ್ದೇವೆ. ‘ನಿಮ್ಮ ಎಲ್ಲಾ ಡೋಸ್‌ಗಳು ಯಶಸ್ವಿಯಾಗಿ ಮುಗಿದಿವೆ’ ಎಂಬ ಸಂದೇಶ ಸಹ ನಮಗೆ ಈಗಾಗಲೇ ಬಂದಿದೆ. ಆದರೆ ಜೂನ್‌ 1ರಂದು ಬೆಳಿಗ್ಗೆ ನಮ್ಮ ಮೊಬೈಲ್ ಫೋನಿಗೆ ‘ನಿಮ್ಮ ಎರಡನೇ ಡೋಸ್ ಲಸಿಕೆ ಬಾಕಿ ಇದೆ, ಜೂನ್‌ 4ರಂದು ನೀವು ಲಸಿಕೆ ಪಡೆಯಲು ಬರಬಹುದು’ ಎಂಬ ಸಂದೇಶ ಬಂದಿದೆ. ಲಸಿಕೆ ಪಡೆದ ಬಗೆಗಿನ ವಿವರಗಳು ಸರಿಯಾಗಿ ದಾಖಲಾಗುತ್ತಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ. ಲಕ್ಷಾಂತರ ಕೋಟಿ ರೂಪಾಯಿಗಳ ವ್ಯವಹಾರ ನಿರ್ವಹಣೆಯು ಕೇವಲ ತಂತ್ರಾಂಶದ ಮೂಲಕ ಕೈ ಬೆರಳಿನಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಈ ಕಾಲದಲ್ಲಿ, ಅಮೂಲ್ಯ ಲಸಿಕೆಯ ಬಗ್ಗೆ ಇಂತಹ ಅಸಮರ್ಪಕ ನಿರ್ವಹಣೆ ವಿಷಾದಕರ. ಇನ್ನಾದರೂ ಸರಿ ಹೋಗಬಹುದೇ?

-ವಿ.ತಿಪ್ಪೇಸ್ವಾಮಿ,ಹಿರಿಯೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.