ADVERTISEMENT

ವಾಚಕರ ವಾಣಿ: ಮನೆಯಿಂದ ಕಚೇರಿ ಕೆಲಸ ಸಾಕುಮಾಡಿ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2022, 19:31 IST
Last Updated 28 ಆಗಸ್ಟ್ 2022, 19:31 IST

ಕೋವಿಡ್ ಉಲ್ಬಣಿಸಿದಾಗ ಬಹುಪಾಲು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ ವ್ಯವಸ್ಥೆ ಮಾಡಿದವು, ಅವಕಾಶ ಕಲ್ಪಿಸಿದವು. ಇದು, ಆ ಹೊತ್ತಿಗೆ ಅಗತ್ಯವಾಗಿತ್ತು. ಮನೆಯಿಂದ ಕೆಲಸವು ಮೇಲ್ನೋಟಕ್ಕೆ ಉದ್ಯೋಗಿಗಳಿಗೆ ಆರಾಮ ಎನ್ನಿಸಿದರೂ ವಾಸ್ತವದಲ್ಲಿ 8 ಗಂಟೆಯ ಕೆಲಸ 12- 15 ಗಂಟೆಗಳಿಗೆ ವಿಸ್ತರಿತವಾಗಿ ಉದ್ಯೋಗಿಗಳು ಬೆಳಿಗ್ಗೆ ಏಳು ಏಳುತ್ತಲೇ ಕೆಲಸ ಆರಂಭಿಸಬೇಕಿತ್ತು. ಭೋಜನದ ಸಮಯದಲ್ಲೂ ಮೊಬೈಲ್‌ನಲ್ಲಿ ಕಂಪನಿಯ ಕೆಲಸದ್ದೇ ಚರ್ಚೆ.

ಈ ಅನುಭವವು ಕೆಲವು ದಿನಗಳ ಮಟ್ಟಿಗೆ ಹಿತಕರ ಅನ್ನಿಸಿರಬಹುದು. ನಾಲ್ಕು ಗೋಡೆಗಳ ಮಧ್ಯೆ ಸಿಲುಕಿದ ಉದ್ಯೋಗಿಗಳಿಗೆ ಆ ಬಳಿಕ ಉಸಿರುಗಟ್ಟಿದಂತೆ ಆಗಿರಬಹುದು. ಇದರಿಂದ ವ್ಯಾಪಾರಿಗಳು, ವಾಹನ ಮಾಲೀಕರು ಬಹಳಷ್ಟು ನಷ್ಟ ಅನುಭವಿಸಿದರು. ಅನೇಕರು ಮನೆ ಖಾಲಿ ಮಾಡಿ ತಮ್ಮ ತಮ್ಮ ಊರುಗಳಿಗೆ ತೆರಳಿದ್ದರಿಂದ ಮನೆ ಮಾಲೀಕರು ನಷ್ಟ ಅನುಭವಿಸಿದರು. ಸಾಫ್ಟ್‌ವೇರ್ ಕಂಪನಿಗಳ ಸಮೂಹದ ವಾತಾವರಣ ಸಂತೆಯ ಮಾರನೇ ದಿನದ ಮಾರ್ಕೆಟ್‌ನಂತೆ ಬಿಕೋ ಎನ್ನಿಸಿತ್ತು. ಆದರೆ ಈಗ ಟಿಸಿಎಸ್ ಕಂಪನಿ ಮನೆಯಿಂದ ಕೆಲಸದ ಪದ್ಧತಿ ರದ್ದು ಮಾಡಿರುವುದು ಸ್ವಾಗತಾರ್ಹ. ಎಲ್ಲ ಕಂಪನಿಗಳು, ಸಂಸ್ಥೆಗಳು ಇದೇ ಕ್ರಮ ಆರಂಭಿಸಲಿ. ಸರ್ಕಾರವೂ ಈ ದಿಸೆಯಲ್ಲಿ ಕ್ರಮ ಕೈಗೊಳ್ಳಲಿ.

–ಸತ್ಯಬೋಧ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.