ADVERTISEMENT

ಅಸಹನೆಯ ಜ್ವಾಲಾಮುಖಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 15:40 IST
Last Updated 28 ಜನವರಿ 2021, 15:40 IST

ತಮಿಳುನಾಡಿನಲ್ಲಿ ಆನೆಯೊಂದು ಮಾನವನ ಕ್ರೌರ್ಯಕ್ಕೆ ಬಲಿಯಾದ ಪ್ರಕರಣವನ್ನು ಒಳಗೊಂಡ ಪ.ರಾಮಕೃಷ್ಣ ಶಾಸ್ತ್ರಿ ಅವರ ಲೇಖನ (ಸಂಗತ, ಜ. 25) ವಾಸ್ತವಾಂಶಗಳನ್ನು ನಮ್ಮ ಮುಂದಿಟ್ಟಿದೆ. ಪ್ರಕೃತಿ ವಿಕೋಪಕ್ಕೆ ಅಥವಾ ರೋಗ ರುಜಿನಗಳಿಗೆ ತುತ್ತಾಗಿ ಬೆಳೆ ನಾಶವಾದಾಗ ಮಾನವ ವಿಧಿಯನ್ನು ಶಪಿಸಿ ಸುಮ್ಮನೆ ಕೂರುತ್ತಾನೆ.

ಆದರೆ ಕಾಡುಪ್ರಾಣಿಗಳಿಂದ ಬೆಳೆ ಹಾನಿಯಾದಾಗ ಮಾತ್ರ ಆತನ ಅಸಹನೆಯ ಜ್ವಾಲಾಮುಖಿ ಸ್ಫೋಟಗೊಳ್ಳುವುದನ್ನು ಕಾಣುತ್ತೇವೆ. ಆಗ ಆತನ ಕೋಪಕ್ಕೆ ಸುಲಭವಾಗಿ ಗುರಿಯಾಗುವುದು ಅಮಾಯಕ ಕಾಡುಪ್ರಾಣಿಗಳು. ತಮಿಳುನಾಡಿನಲ್ಲಿ ಆನೆಯೊಂದು ದುರಂತ ಅಂತ್ಯ ಕಂಡದ್ಡು ದೇಶದ ಮಾನವೀಯ ಹೃದಯಗಳನ್ನು ತಲ್ಲಣಗೊಳಿಸದೇ ಇರಲಾರದು. ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು.

ಸಿದ್ಧಾರ್ಥ,ಈದು, ಕಾರ್ಕಳ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.