ADVERTISEMENT

ಸಾವಲ್ಲೂ ರಾಜಕೀಯ ಏಕೆ?

​ಪ್ರಜಾವಾಣಿ ವಾರ್ತೆ
Published 24 ಜನವರಿ 2019, 20:15 IST
Last Updated 24 ಜನವರಿ 2019, 20:15 IST

ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ ಎಂಬ ಕಾರಣದಿಂದ ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನಕ್ಕೆ ತಾವು ಬರಲಿಲ್ಲ ಎಂದುಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದರೂ ಸಾವಿನ ವಿಷಯದಲ್ಲಿ ಉಪಮುಖ್ಯಮಂತ್ರಿ ರಾಜಕೀಯ ಬೆರೆಸಿ ಇಲ್ಲದ ಚರ್ಚೆ ಹುಟ್ಟುಹಾಕಿದ್ದಾರೆ.

ಪ್ರಧಾನಿ ಬರುತ್ತಾರೆ ಎಂಬುದು ಗೊತ್ತಾದರೆ ಜನಜಂಗುಳಿ ಇನ್ನಷ್ಟು ಹೆಚ್ಚುತ್ತಿತ್ತು ಹಾಗೂ ಮೂರ್ನಾಲ್ಕು ಗಂಟೆಗಳಾದರೂ ಸಾರ್ವಜನಿಕರಿಗೆ ದರ್ಶನವನ್ನು ತಡೆಹಿಡಿಯಬೇಕಾಗುತ್ತಿತ್ತು.

ಸೆಲೆಬ್ರಿಟಿಗಳ ಮದುವೆಗೆ ಭದ್ರತೆ ಸಮಸ್ಯೆಯಾಗುವುದಿಲ್ಲವೇ ಎಂದು ಪರಮೇಶ್ವರ ಅವರು ಪ್ರಶ್ನಿಸಿದ್ದಾರೆ. ಆದರೆ, ಹಿಂದೆ ಒಮ್ಮೆ ರಸ್ತೆ ಬದಿಯಲ್ಲಿ ನಿಂತು ಮೋದಿ ಎಂದು ಕರೆದಿದ್ದ ಬಾಲಕಿಗೆ ಇದೇ ಮೋದಿ ಯಾವ ಭದ್ರತೆಯ ಬಗ್ಗೆಯೂ ತಲೆಕೆಡಿಸಿ
ಕೊಳ್ಳದೆ ಆ ಬಾಲಕಿ ಬಳಿ ತೆರಳಿ ಕ್ಷೇಮ ವಿಚಾರಿಸಿದ್ದರು.

ADVERTISEMENT

ಮೋದಿ ಬರಲಿಲ್ಲವೆಂದು ಹೇಳುವ ನೀವು, ನಿಮ್ಮ ಪಕ್ಷದ ರಾಷ್ಟ್ರೀಯ ನಾಯಕರಾದ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಅಂತಿಮ ದರ್ಶನಕ್ಕೆ ಏಕೆ ಬರಲಿಲ್ಲ ಎಂದು ಹೇಳುವಿರಾ?

ಮಣಿಕಂಠ ಪ. ಹಿರೇಮಠ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.