ADVERTISEMENT

ಹುಲಿಗಳ ಸಾವು | ಪರಿಸರದಲ್ಲಿ ಹಸ್ತಕ್ಷೇಪ: ತಲೆತಗ್ಗಿಸಬೇಕಾಗಿದೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 20:08 IST
Last Updated 30 ಜುಲೈ 2019, 20:08 IST

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ವರ್ಷಾರಂಭದಿಂದ ಇದುವರೆಗೆ ನಾಲ್ಕು ಹುಲಿಗಳು ಮೃತಪಟ್ಟಿರುವುದು ಮತ್ತು ವಿದ್ಯುತ್ ಆಘಾತದಿಂದ ಹೆಬ್ಬಕಗಳು ವಿನಾಶದತ್ತ ಸಾಗಿರುವುದು (ಪ್ರ.ವಾ., ಜುಲೈ 29) ನಾವು ಪರಿಸರದಲ್ಲಿ ಎಷ್ಟರಮಟ್ಟಿಗೆ ಹಸ್ತಕ್ಷೇಪ ಮಾಡುತ್ತಿದ್ದೇವೆ ಎಂಬುದನ್ನು ಎತ್ತಿ ತೋರಿಸುತ್ತಿವೆ. ದೇಶದಲ್ಲಿ ಹುಲಿಗಳ ಸಂತತಿ ಹೆಚ್ಚಿರುವುದು ಸಂತಸದ ಸಂಗತಿಯಾದರೂ ಮಾನವ- ವನ್ಯಜೀವಿ ಸಂಘರ್ಷಕ್ಕೆ ಹುಲಿಗಳು ಆಗಾಗ್ಗೆ ಬಲಿಯಾಗುತ್ತಲೇ ಇರುವುದು ಕಳವಳಕಾರಿ.

ಇನ್ನು ಹೆಬ್ಬಕಗಳ ಅಳಿವಿಗೆ ಹೈ ವೋಲ್ಟೇಜ್ ವಿದ್ಯುತ್ ತಂತಿಗಳೇ ಕಾರಣವೆಂದು ತಿಳಿದ ನಂತರವೂ ಅವುಗಳ ಸಾವನ್ನು ತಡೆಯಲು ವಿಫಲರಾಗಿರುವುದು ಭಾರತೀಯರಾದ ನಾವೆಲ್ಲಾ ತಲೆತಗ್ಗಿಸಬೇಕಾದ ಸಂಗತಿ. ದೇಶದಲ್ಲಿ ಈಗ ಅಂದಾಜು 150 ಹೆಬ್ಬಕಗಳಷ್ಟೇ ಉಳಿದಿವೆಯೆಂದಾದರೆ ಅದಕ್ಕೆ ಮನುಷ್ಯನೇ ನೇರ ಹೊಣೆ. ಮುಂದೆ, ಹೀಗೊಂದು ಹಕ್ಕಿ ನಮ್ಮ ಭಾರತದಲ್ಲಿ ಇತ್ತು ಎಂದು ಮುಂದಿನ ಪೀಳಿಗೆಗೆ ಚಿತ್ರಗಳಲ್ಲಿ ತೋರಿಸುವಂತಾಗುವ ಮೊದಲು ನಾವು ಎಚ್ಚೆತ್ತುಕೊಳ್ಳಬೇಕಾಗಿದೆ.

ಸ್ನೇಹಾ ಕೃಷ್ಣನ್, ಕೊರಟಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.