ADVERTISEMENT

ಪಕ್ಷಾಂತರ: ವಿಚಿತ್ರ ನಡೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 6 ಏಪ್ರಿಲ್ 2022, 19:31 IST
Last Updated 6 ಏಪ್ರಿಲ್ 2022, 19:31 IST

ಯಾರಾದರೂ ಪಕ್ಷ ಬಿಟ್ಟು ಹೋದಾಗ ಮೂಲ ಪಕ್ಷದವರು ಅವರನ್ನು ತೆಗಳುವುದು, ಪಕ್ಷ ಬಿಟ್ಟು ಹೋದವರು ತಾವು ಇದ್ದ ಪಕ್ಷವನ್ನು ಟೀಕಿಸುವುದು ಸಾಮಾನ್ಯವಾದ ವಿಷಯ. ಆದರೆ ಜಾತ್ಯತೀತ ಜನತಾದಳದಲ್ಲಿ ಹಾಗಲ್ಲ. ಹೋಗುವವರು ‘ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿದ್ದೇನೆ. ಅವರ ಅನುಮತಿ ಪಡೆದು ಹೊರ ನಡೆದಿರುವೆ’ ಎನ್ನುತ್ತಾರೆ. ಅದೇ ರೀತಿಯಲ್ಲಿ ಕುಮಾರಸ್ವಾಮಿ ಅವರೂ ‘ಅವರಿಗೆ ಅಲ್ಲಿ ಉತ್ತಮ ಅವಕಾಶ ಇರಬಹುದು, ಹೋಗಿ ಎಂದೆ’ ಅನ್ನುತ್ತಾರೆ. ಸಾಮಾನ್ಯ ಜನರಿಗೆ ಇದೊಂದು ವಿಚಿತ್ರವಾಗಿ ಕಂಡರೆ ಅಚ್ಚರಿಯಿಲ್ಲ! ಇದು ಹೇಗೆ ಸಾಧ್ಯ, ಹೀಗೇ ಮುಂದುವರಿದರೆ ಇವರು ಪಕ್ಷ ಕಟ್ಟುವುದಾದರೂ ಹೇಗೆ ಎಂಬ ಪ್ರಶ್ನೆಗಳು
ಸಾರ್ವಜನಿಕರಲ್ಲಿ ಮೂಡಬಹುದು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಕೋನರಡ್ಡಿ ಅವರು ಈಗ ಸಿದ್ದರಾಮಯ್ಯ ಅವರ ಹಿಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಸರದಿ. ಲೆಕ್ಕಕ್ಕೆ ಜನತಾದಳದಲ್ಲಿದ್ದರೂ ಪಕ್ಷದ ಯಾವುದೇ ಹೊಣೆಯನ್ನು ಹೊರದೇ ತಮ್ಮ ಪಾಡಿಗೆ ತಾವಿದ್ದ ಹೊರಟ್ಟಿ ಈಗ ಮತ್ತಷ್ಟು ಅವಕಾಶವನ್ನರಸಿ ಬಿಜೆಪಿ ಕಡೆಗೆ ಮುಖ ಮಾಡಿದ್ದಾರೆ. ಸಾರ್ವಜನಿಕರು ಹಾಗೂ ಆಯಾ ಪಕ್ಷಗಳ ಕಾರ್ಯಕರ್ತರಿಗೆ ಇದರಿಂದ ಒಂದು ರೀತಿಯಲ್ಲಿ ಕಸಿವಿಸಿ ಅನ್ನಿಸಬಹುದು.

ಈ.ಬಸವರಾಜು,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.