ADVERTISEMENT

ಪ್ರಜಾಪ್ರಭುತ್ವದ ಮೌಲ್ಯ ಉಳಿಸಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 25 ಮಾರ್ಚ್ 2021, 19:30 IST
Last Updated 25 ಮಾರ್ಚ್ 2021, 19:30 IST

ವಿಧಾನಮಂಡಲ ಎಂದರೆ ದೇಗುಲ ಇದ್ದಂತೆ. ಅದು ಅತ್ಯಂತ ಪವಿತ್ರವಾದ ಸ್ಥಾನವೂ ಹೌದು ಎಂದು ನಂಬಿರುವ ರಾಜ್ಯದ ಪ್ರಜೆಗಳ ಮುಂದೆ ಈಗಿನ ಶಾಸಕರ, ಸಚಿವರ ವೈಯಕ್ತಿಕ ಚಾರಿತ್ರ್ಯಹರಣದ ಹೇಳಿಕೆಗಳು, ಪರಸ್ಪರ ತಿಕ್ಕಾಟಗಳು ಬಯಲಾಗುತ್ತಿವೆ. ಕಳೆದ ಒಂದು ವರ್ಷದಿಂದ ರಾಜ್ಯದ ಆರ್ಥಿಕ ವ್ಯವಸ್ಥೆ ನೆಲಕಚ್ಚಿದೆ, ಉದ್ಯೋಗ ಕಳೆದುಕೊಂಡು ಕುಳಿತಿದ್ದ ಅದೆಷ್ಟೋ ಕುಟುಂಬಗಳ ಪರಿಸ್ಥಿತಿ ಶೋಚನೀಯವಾಗಿದೆ.

ಇಂಥ ಬಿಕ್ಕಟ್ಟಿನ ಪರಿಸ್ಥಿತಿಯ ಕುರಿತು ಸದನದಲ್ಲಿ ಗಂಭೀರವಾದ ಚರ್ಚೆ ಆಗಬೇಕಿತ್ತು. ಆದರೆ, ನಮ್ಮ ಜನಪ್ರತಿನಿಧಿ
ಗಳು ಕೆಲವರು ಜನಹಿತದ ನೆಲೆಯಲ್ಲಿ ಅಸಂಬದ್ಧವೆನಿಸುವ ವಿಚಾರಗಳ ಬಗೆಗಿನ ಚರ್ಚೆಗೆ ಸದನದ ಸಮಯವನ್ನು ಬಳಸಿರುವುದು ಸರಿಯಲ್ಲ.

- ಬಾಲಾಜಿ ಕುಂಬಾರ ಚಟ್ನಾಳ,ಔರಾದ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.