ADVERTISEMENT

ಉಬ್ಬು ಗುಂಬಳ ಹೆಸರೇ ಸೂಕ್ತ!

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 19:30 IST
Last Updated 26 ಜನವರಿ 2021, 19:30 IST

ಚೀನಾದ ಡ್ರ್ಯಾಗನ್ ಫ್ರೂಟ್ ಅನ್ನು ಗುಜರಾತ್ ಸರ್ಕಾರ ಇತ್ತೀಚೆಗೆ ಕಮಲಂ ಎಂದು ಮರುನಾಮಕರಣ ಮಾಡಿದೆ. ಅದು ಕಮಲದ ಹೂವಿನಂತೆ ಕಾಣುವುದು ಇದರ ಹಿಂದಿನ ಕಾರಣವಂತೆ. ಬಹುಶಃ ಹಣ್ಣಿಗಿಂತ ಪಕ್ಷದ ಚಿಹ್ನೆ ಜನರ ಬಾಯಲ್ಲಿ ಸದಾ ಹರಿದಾಡಲೆಂಬ ಆಲೋಚನೆ ಇದರ ಹಿಂದೆ ಇರಬಹುದು! ಚೀನಾದ ಹಣ್ಣನ್ನು ನಿಷೇಧ ಮಾಡಲಾಗದಿದ್ದರೂ ಅದರ ಹೆಸರನ್ನು ಬದಲಾಯಿಸುವ ತಂತ್ರವೇ ಸರಿ!

ಇದರಿಂದ ನಮ್ಮ ರಾಜ್ಯದಲ್ಲೂ ಹುಮ್ಮಸ್ಸು ಬಂದು, ನಮ್ಮ ಚೀನೀಕಾಯಿಯ ಹೆಸರನ್ನು ಪಕ್ಷದ ಪ್ರಚಾರದ ಸಲುವಾಗಿ ಬದಲಿಸುವ ಆಲೋಚನೆ ಮುನ್ನೆಲೆಗೆ ಬರುವ ಮುನ್ನ, ಅದಕ್ಕಿರುವ ನಾಟಿ ಹೆಸರು ‘ಉಬ್ಬು ಗುಂಬಳ!’ ಎಂಬ ಕರೆಯುವುದೇ ಸೂಕ್ತ ಎನಿಸುತ್ತದೆ.

ನಿಖಿತಾ ಶಶಾಂಕ್ ಭಟ್,ಸಿದ್ದಾಪುರ, ಕುಂದಾಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.