ADVERTISEMENT

ಜ್ಞಾನಕೋಶ’ ಕಲಿಕಾ ಕಾರ್ಯಕ್ರಮ: ಅನುಕರಣೀಯ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 19:37 IST
Last Updated 18 ಡಿಸೆಂಬರ್ 2018, 19:37 IST

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳ 400ಕ್ಕೂ ಅಧಿಕ ಸದಸ್ಯರಿಗೆ ಅಕ್ಷರದ ಅರಿವೇ ಇಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ. ಇದು ಒಂದು ಜಿಲ್ಲೆಗೆ ಸೀಮಿತವಾದ ಸಮಸ್ಯೆಯಲ್ಲ. ಅನಕ್ಷರಸ್ಥರು ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿರುವ ವಿದ್ಯಮಾನ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕಾಣಸಿಗುತ್ತದೆ. ಇದರಲ್ಲಿ ತಪ್ಪು ಹುಡುಕುವಂತಹುದು ಏನೂ ಇಲ್ಲ. ಮೀಸಲಾತಿ ನಿಯಮ ಪಾಲಿಸಬೇಕಾದ ಕಾರಣ ಕೆಲವೊಮ್ಮೆ ಇದು ಅನಿವಾರ್ಯವೂ ಆಗಿರುತ್ತದೆ. ಆದರೆ, ಆಯ್ಕೆಯಾದ ನಂತರ ಅವರನ್ನು ಈ ಹುದ್ದೆಗೆ ಸಜ್ಜುಗೊಳಿಸುವ ಕೆಲಸ ಆಗಬೇಕು.

ಅನಕ್ಷರಸ್ಥರಿಗೆ ಅಕ್ಷರಾಭ್ಯಾಸ ಮಾಡಿಸುವ ಕೆಲಸಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಆಡಳಿತ ಮುಂದಾಗಿರುವುದು ಒಳ್ಳೆಯ ಪ್ರಯತ್ನ. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ‘ಜ್ಞಾನಕೋಶ’ ಕಾರ್ಯಕ್ರಮದಡಿ ಕಲಿಕೆಗೆ ಅವಕಾಶ ಕಲ್ಪಿಸುತ್ತಿರುವುದು ಅನುಕರಣೀಯ. ಮುಂದಿನ ಜನವರಿಯಿಂದ ಇದು ಶುರುವಾಗಲಿದೆಯಂತೆ. ಅನಕ್ಷರಸ್ಥ ಸದಸ್ಯರನ್ನು ಇದೇ ರೀತಿ ಉಳಿದ ಜಿಲ್ಲೆಗಳಲ್ಲೂ ಗುರುತಿಸಿ ಅವರಿಗೆ ಅಕ್ಷರ ಜ್ಞಾನ ನೀಡಿದರೆಸದಸ್ಯರಾಗಿ ತಮ್ಮ ಕೆಲಸವನ್ನು ಸಮರ್ಥವಾಗಿ ನಿಭಾಯಿಸಲು ಸಹಾಯಕವಾಗುತ್ತದೆ.

ಮಧುಕುಮಾರ್ ಬಿಳಿಚೋಡು,ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.