ADVERTISEMENT

ವಾಚಕರ ವಾಣಿ: ಪ್ರಾಣ ರಕ್ಷಣೆಗೆ ಒತ್ತು ನೀಡಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 19:31 IST
Last Updated 13 ಸೆಪ್ಟೆಂಬರ್ 2020, 19:31 IST

ಮಂಡ್ಯ ನಗರದ ಹೊರವಲಯದಲ್ಲಿರುವ ಅರಕೇಶ್ವರ ಸ್ವಾಮಿ ದೇವಸ್ಥಾನದ ಹುಂಡಿ ಕಳ್ಳತನ ಮಾಡಲು ಕಳ್ಳರು ದೇವಸ್ಥಾನದ ಪುರೋಹಿತರೂ ಜೊತೆಗೆ ಕಾವಲೂ ಇರುತ್ತಿದ್ದ ಮೂರು ವ್ಯಕ್ತಿಗಳನ್ನು ಬರ್ಬರವಾಗಿ ಹತ್ಯೆ ಮಾಡಿ ಹುಂಡಿಯ ಹಣ ದೋಚಿರುತ್ತಾರೆ, ಪ್ರಾಣ ಕಳೆದುಕೊಂಡ ಆ ಅಮಾಯಕರ ಪ್ರಾಣ ರಕ್ಷಣೆಗೆ ಯಾವುದೇ ಸೂಕ್ತ ಒತ್ತು ನೀಡದೆ ಕೆಲಸಕ್ಕೆ ನೇಮಿಸಿಕೊಂಡದ್ದು ತಪ್ಪಲ್ಲವೇ?.

ದೇವಸ್ಥಾನದ, ಎ. ಟಿ. ಎಂ. ಗಳಲ್ಲಿನ ಯಾವುದೇ ಕಾವಲುಗಾರರ ಪ್ರಾಣ ರಕ್ಷಣೆಗೆ ಮಾಲೀಕರು ಒತ್ತು ನೀಡಬೇಕು. ಸತ್ತ ನಂತರ ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳುವುದು ಎಷ್ಟು ಸರಿ?. ಹಣ ದೋಚಲು ಬಹಳಷ್ಟು ಕಾವಲುಗಾರರ ಕೊಲೆಗಳು ನಡೆಯುತ್ತಲೇ ಇರುತ್ತವೆ. ಹಾಗಿದ್ದರೂ ಅಮಾಯಕರ ಪ್ರಾಣ ರಕ್ಷಣೆಯ ವಿಚಾರದಲ್ಲಿ ಮಾತ್ರ ಸಂಭಂದಿಸಿದವರ ನಿರ್ಲಕ್ಷ್ಯ ಖಂಡನೀಯ. ದೇವಸ್ಥಾನದ ಆದಾಯ ಮಾತ್ರ ಸಾಕು, ಅವರವರ ಸಂಪತ್ತು ರಕ್ಷಿಸಿದರೆ ಸಾಕು ಎಂಬ ನೀತಿ ತರವಲ್ಲ, ಸಂಪತ್ತಿನ ರಕ್ಷಣೆಗೆ ಕೊಡುವ ಪ್ರಾಮುಖ್ಯತೆ ಅಮಾಯಕರ ಪ್ರಾಣ ರಕ್ಷಣೆಗೂ ಕೊಡಲಿ.
-‌ಮಂಜುನಾಥ್ ಜೈನ್ ಎಂ. ಪಿ, ‌ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT