ADVERTISEMENT

ವಾಚಕರ ವಾಣಿ: ಕನ್ನಡದಲ್ಲಿ ಎಂಜಿನಿಯರಿಂಗ್‌; ವೃತ್ತಿಗೆ ತೊಡಕು?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 11 ಜೂನ್ 2021, 19:30 IST
Last Updated 11 ಜೂನ್ 2021, 19:30 IST

ಎಂಜಿನಿಯರಿಂಗ್ ಪದವಿಯನ್ನು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುವ ಸಾಧ್ಯತೆಯು ಕನ್ನಡ ಅಭಿಮಾನಿಗಳಾದ ನಮಗೆ ನಿಶ್ಚಯವಾಗಿಯೂ ಸಂತಸದ ವಿಷಯ. ಆದರೆ ಈ ನಿರ್ಧಾರದಿಂದ ಗ್ರಾಮೀಣ ವಿದ್ಯಾರ್ಥಿ ಗಳಿಗೆ ಕೇವಲ ಪದವಿಯ ಸರ್ಟಿಫಿಕೇಟ್ ಪಡೆಯಲು ಅನುಕೂಲವಾಗುತ್ತದೆ ಹೊರತು, ಅವರ ವೃತ್ತಿ ಜೀವನಕ್ಕಲ್ಲ. ಏಕೆಂದರೆ ಅವರೆಲ್ಲರಿಗೂ ರಾಜ್ಯ ಸರ್ಕಾರಿ ನೌಕರಿಯೇ ಸಿಗುತ್ತದೆಯೇ? ಕರ್ನಾಟಕವಲ್ಲದೆ ಬೇರೆ ರಾಜ್ಯ, ದೇಶಗಳಿಗೆ ಸಂಬಂಧಿಸಿದ ಕಂಪನಿಗಳಲ್ಲಿ ಅವರು ಕೆಲಸ ಮಾಡಬೇಕಾಗುತ್ತದೆ. ಪರಿಪೂರ್ಣವಾಗಿ ಕನ್ನಡದಲ್ಲೇ ಓದಿರುವ ಅಭ್ಯರ್ಥಿ ಕೆಲಸಕ್ಕೆ ಸೇರುವಾಗ ಸಂದರ್ಶನವನ್ನು ಹೇಗೆ ಎದುರಿಸಬೇಕು, ನಂತರದಲ್ಲಿ ಸಹ ಕೆಲಸಗಾರರು ಅಥವಾ ಮೇಲಧಿಕಾರಿಗಳ ಜೊತೆ ಹೇಗೆ ವ್ಯವಹರಿಸಬೇಕು? ಅವರು ತಮ್ಮ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳುವ ಬಗೆ ಹೇಗೆ? ಇದಕ್ಕೆಲ್ಲ ಪ್ರಪಂಚದ ವ್ಯವಹಾರ ಭಾಷೆಯಾದ ಇಂಗ್ಲಿಷ್ ಗೊತ್ತಿರಬೇಕಾದುದು ಅನಿವಾರ್ಯ.

ಕನ್ನಡ ನಮ್ಮ ಹೃದಯದ ಭಾಷೆ. ಯಾವತ್ತಿಗೂ ಅದಕ್ಕೆ ಮೊದಲ ಆದ್ಯತೆ. ಆದರೆ ಜೀವನೋಪಾಯದ ಅನೇಕ ವೃತ್ತಿಗಳಿಗೆ ಇಂಗ್ಲಿಷ್ ಅತ್ಯಗತ್ಯ. ಗ್ರಾಮೀಣ ವಿದ್ಯಾರ್ಥಿಗಳು ಈಗ ಕಲಿಯಬಹುದಾದ ಅಲ್ಪಸ್ವಲ್ಪ ಇಂಗ್ಲಿಷನ್ನೂ ಕಲಿಯದಂತೆ ಮಾಡುವ ಯೋಜನೆ ಇದಾಗಿದೆ ಅನಿಸುತ್ತಿದೆ.

-ಅರ್ಚನಾ ಶಂಕರ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.