ADVERTISEMENT

ನೈತಿಕ ಸಮಾಜ ನಿರ್ಮಾಣ ಎಲ್ಲರ ಹೊಣೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 7 ಅಕ್ಟೋಬರ್ 2020, 19:30 IST
Last Updated 7 ಅಕ್ಟೋಬರ್ 2020, 19:30 IST

ಶಾಲೆಗಳಲ್ಲಿ ಪ್ರಾಥಮಿಕ ತರಗತಿಯಿಂದಲೇ ನೈತಿಕ ಶಿಕ್ಷಣದ ವ್ಯವಸ್ಥೆ ಮಾಡಬೇಕು ಎಂದು ಗೋಡೆ ಶಿವರಾಜ್‌ (ವಾ.ವಾ., ಅ. 7)ಹೇಳಿದ್ದಾರೆ. ಸಮಾಜದ ನೈತಿಕ ಅಧೋಗತಿಗೆ, ಅಶಿಸ್ತಿಗೆ, ಸ್ವಚ್ಛತೆಯ ಕೊರತೆಗೆ ಒಂದು ರೀತಿಯಲ್ಲಿ ಶಿಕ್ಷಣರಂಗ ಮತ್ತು ಶಿಕ್ಷಕರು ಕಾರಣ ಎಂಬಂತಹ ಆರೋಪ ಅದರಲ್ಲಿದೆ. ವಾಸ್ತವವಾಗಿ ಮಕ್ಕಳು ಶಾಲೆಯಲ್ಲಿರುವ ಐದಾರು ಗಂಟೆಗಳಲ್ಲಿ ಬದುಕಿಗೆ ಅವಶ್ಯಕವಾಗಿ ಬೇಕಾಗಿದ್ದೆಲ್ಲವನ್ನೂ ಶಿಕ್ಷಕರು ತಿಳಿಸಿ ಹೇಳುತ್ತಾರೆ. ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದುದು ವಿದ್ಯಾರ್ಥಿಗಳ ಹೊಣೆ.

ಮಕ್ಕಳು ತಮ್ಮ ದಿನದ ಹೆಚ್ಚಿನ ಸಮಯವನ್ನು ಮನೆಯವರೊಂದಿಗೆ, ನೆರೆಹೊರೆಯವರೊಂದಿಗೆ ಕಳೆಯುತ್ತಾರೆ. ಶಿಕ್ಷಕರ ಪಾಠ ಮತ್ತು ಅವರ ವ್ಯಕ್ತಿತ್ವಕ್ಕಿಂತ ಶಾಲೆಯಾಚೆಯ ಅಂಶಗಳ ಬಲವಾದ ಪ್ರಭಾವಕ್ಕೆ ಮಕ್ಕಳು ಒಳಗಾಗುತ್ತಾರೆ. ಸಿನಿಮಾ, ಮೊಬೈಲ್, ಮಾಧ್ಯಮಗಳಿಂದ ಮಾತ್ರವಲ್ಲದೆ ರಾಜಕಾರಣಿಗಳು ಹಾಗೂ ಹಿರಿಯರೂ ಅವರ ಮೇಲೆ ಗಾಢವಾದ ಪರಿಣಾಮ ಬೀರುತ್ತಾರೆ. ಮುಖ್ಯವಾಗಿ, ಸಮಾಜದಲ್ಲಿ ದುರಭ್ಯಾಸಗಳಿಗೆ, ದುಃಸ್ಥಿತಿಗೆ ಓದಿದವರೇ ಹೆಚ್ಚು ಕಾರಣರಾಗಿರುತ್ತಾರೆ ಎಂಬುದನ್ನು ನಾವು ಮನಗಾಣಬೇಕು. ಒಟ್ಟಾರೆ ಒಳ್ಳೆಯ ಸಮಾಜ ನಿರ್ಮಾಣವಾದರೆ ಮಕ್ಕಳು ಸಹಜವಾಗಿಯೇ ಉತ್ತಮ ವ್ಯಕ್ತಿತ್ವ ಹೊಂದುತ್ತಾರೆ. ಹೀಗಾಗಿ ಯಾರೋ ಒಬ್ಬರನ್ನು ಈ ವಿಷಯದಲ್ಲಿ ದೂರುವುದು ಸಲ್ಲದು.

– ಬಿ.ಆರ್.ಅಣ್ಣಾಸಾಗರ,ಸೇಡಂ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.