ADVERTISEMENT

ಮಾನವೀಯ ಸಂಬಂಧ ಕುಸಿತಕ್ಕೆ ನಿದರ್ಶನ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 22 ನವೆಂಬರ್ 2019, 17:11 IST
Last Updated 22 ನವೆಂಬರ್ 2019, 17:11 IST

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಎಚ್‌ಆರ್‌ಸಿ) ಬಿಡುಗಡೆ ಮಾಡಿರುವ ‘ಭಾರತದಲ್ಲಿ ಅಪರಾಧ- 2017’ರ ವಾರ್ಷಿಕ ವರದಿಯ ಅಂಕಿ-ಅಂಶ ನೋಡಿದರೆ (ಪ್ರ.ವಾ., ನ. 20), ಭವ್ಯ ಭರತ ಖಂಡದ ಮೌಲ್ಯಗಳನ್ನು ಗೆದ್ದಲು ತಿನ್ನುತ್ತಿದೆಯೇ ಎಂಬ ಪ್ರಶ್ನೆ ಪ್ರಜ್ಞಾವಂತ ಓದುಗರನ್ನು ಕಾಡದೇ ಇರದು. ಕಳೆದ ಐದು ವರ್ಷಗಳ ಅಂಕಿ- ಅಂಶಗಳ ಪ್ರಕಾರ ವ್ಯಾಜ್ಯ, ಪ್ರೀತಿ ಕಾರಣದ ಕೊಲೆಗಳ ಸಂಖ್ಯೆ ಏರಿಕೆಯಾಗಿರುವುದನ್ನು ಕಂಡರೆ, ಮಾನವೀಯ ಸಂಬಂಧಗಳು ಕುಸಿಯುತ್ತಿರುವುದು ಸ್ಪಷ್ಟವಾಗುತ್ತದೆ.

ಒಂದೆಡೆ ಸುಶಿಕ್ಷಿತರ ಸಂಖ್ಯೆ ಏರಿದಂತೆಯೇ, ಅಪರಾಧಗಳ ಸಂಖ್ಯೆಯೂ ಏರುತ್ತಿರುವುದು ಆತಂಕಕಾರಿ. ಸಮಾಜದಲ್ಲಿನ ಜನರ ಮನಃಸ್ಥಿತಿ ಬದಲಾಗಿ ಪರಸ್ಪರ ಗೌರವ, ಆರೋಗ್ಯಕರ ಚಿಂತನೆ ಹಾಗೂ ವಿಶಾಲ ಭ್ರಾತೃತ್ವದ ಕಾಂತಿಯು ಹೊರಹೊಮ್ಮಬೇಕಾಗಿದೆ. ನಮ್ಮ ಅಂತಃಕರಣದೊಂದಿಗೆ ಸಮಾಜ
ದಲ್ಲಿಯೂ ಬದಲಾವಣೆಯ ಬೆಳಕು ಚೆಲ್ಲುವಂತಾಗಬೇಕು. ಈ ನಿಟ್ಟಿನಲ್ಲಿ ಶಾಲಾ- ಕಾಲೇಜುಗಳಲ್ಲಿ, ಸಾರ್ವಜನಿಕ ಸಭೆ- ಸಮಾರಂಭಗಳಲ್ಲಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅಗತ್ಯವಾದ ಮೌಲ್ಯಗಳನ್ನು ಬಿತ್ತುವ ಕಾರ್ಯ ನಡೆಯಬೇಕಾಗಿದೆ.

ಶೈಲಜಾ ವಿ., ಕೋಲಾರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.