ADVERTISEMENT

ರಾಜಕೀಯ ಪ್ರೇರಿತವಾಗಿದ್ದರೆ ತಪ್ಪೇನು?

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 17:14 IST
Last Updated 28 ಸೆಪ್ಟೆಂಬರ್ 2021, 17:14 IST

‘ಕೃಷಿ ಮಸೂದೆ ನೆಪದಲ್ಲಿ ಈಗ ನಡೆಯುತ್ತಿರುವ ಹೋರಾಟ ರಾಜಕೀಯಪ್ರೇರಿತ’ ಎಂದಿದ್ದಾರೆ ಬಿಜೆಪಿ ಮುಖಂಡ ಸಿ.ಟಿ.ರವಿ (ಪ್ರ.ವಾ., ಸೆ. 28). ಸರಿಯೇ, ಕೃಷಿ ಮಸೂದೆ ರೈತರಿಗೆ ಮಾರಕವಾಗುತ್ತಿರುವ ಹಿನ್ನೆಲೆಯಲ್ಲಿ ನಡೆಯುತ್ತಿರುವ ರೈತರ ಹೋರಾಟ ರಾಜಕೀಯಪ್ರೇರಿತವಾಗಿದ್ದರೆ ತಪ್ಪೇನು? ನಮ್ಮ ರಾಜ್ಯದಲ್ಲಿಯೇ ಈಗ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಬೆಳೆಗಾರರ ಗತಿ ಏನಾಗಿದೆ? ರಸಗೊಬ್ಬರ ಬೆಲೆ ಗಗನಕ್ಕೇರಿದ್ದು ರೈತ ಬೆಳೆದ ಬೆಳೆಯ ಬೆಲೆ ಪಾತಾಳಕ್ಕಿಳಿದಿದೆ. ಹೀಗಾದಾಗ ರೈತರ ಹಿತ ಕಾಯುವವರು ಯಾರು?

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹಿತ ಕಾಯುತ್ತೇವೆ ಎಂದು ಹೇಳಿಯೇ ಅಲ್ಲವೇ ಅಧಿಕಾರಕ್ಕೆ ಬಂದದ್ದು. ಅಧಿಕಾರ ಸಿಕ್ಕ ತಕ್ಷಣ ಸರ್ಕಾರವು ರೈತರ ಹಿತ ಮರೆತರೆ ರೈತರು ಹೋರಾಟ ಮಾಡಬಾರದೇ? ರೈತರ ದುಃಸ್ಥಿತಿಯನ್ನು ಮುಖಂಡರು ಮೊದಲು ಅರ್ಥಮಾಡಿಕೊಳ್ಳಲಿ, ರಾಜಕೀಯ ಆಮೇಲೆ ಅಲ್ಲವೇ?

– ಹುರುಕಡ್ಲಿ ಶಿವಕುಮಾರ,ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.