ADVERTISEMENT

ವಾಚಕರ ವಾಣಿ| ಕಲ್ಲಿನಕೋಟೆ ಜೀರ್ಣೋದ್ಧಾರವಾಗಲಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2022, 19:31 IST
Last Updated 19 ಜೂನ್ 2022, 19:31 IST

ಬೀದರ್‌ ಜಿಲ್ಲೆ ಬಸವಕಲ್ಯಾಣದಲ್ಲಿರುವ, ಬಿಜ್ಜಳ ರಾಜನು ರಾಜ್ಯಭಾರ ಮಾಡಿದ ಕೋಟೆ ಕೊತ್ತಲಗಳನ್ನು ನಾನು ಇತ್ತೀಚೆಗೆ ಕುಟುಂಬ ಸಮೇತ ವೀಕ್ಷಣೆ ಮಾಡಿದೆ. 12ನೇ ಶತಮಾನದಲ್ಲಿ ಇಡೀ ವಿಶ್ವಕ್ಕೆ ಸಾಮಾಜಿಕ ಸಮಾನತೆ ಸಾರಿದ ಬಸವಣ್ಣ ಹಾಗೂ 770 ಶರಣರು ಕೂಡಿ ನಾಡಿನ ಜನರಿಗೆ ಅತ್ಯುತ್ತಮ ಸಾಮಾಜಿಕ ನ್ಯಾಯ, ನೀತಿ ನೀಡಿರುವುದರಿಂದ ಅವರನ್ನು ಈಗಲೂ ನೆನೆಯುತ್ತೇವೆ. ಪ್ರಜೆಗಳ ಕುಂದುಕೊರತೆಯನ್ನು ಆಲಿಸಿ, ಚರ್ಚಿಸಿ ನ್ಯಾಯ ನೀಡಿರುವ ಅನುಭವ ಮಂಟಪವಿದು. ಬಿಜ್ಜಳ ರಾಜ ಹಾಗೂ ಕ್ರಾಂತಿಕಾರಿ ಬಸವಣ್ಣ ಅವರು ಇದ್ದು ಕಾರ್ಯಭಾರ ಮಾಡಿದ್ದ ಕಲ್ಲಿನಕೋಟೆ ಹಾಳು ಬಿದ್ದಿರುವುದನ್ನು ನೋಡಿ ನೋವಾಯಿತು. ಜೀರ್ಣೋದ್ಧಾರ ಮಾಡುವುದರಿಂದ ಕೋಟೆ ಉಳಿದೀತು, ಉದ್ಯೋಗಾವಕಾಶವೂ ದೊರೆತೀತು. ಸರ್ಕಾರಕ್ಕೆ ಆದಾಯದ ಮೂಲವಾದೀತು.

- ಎಂ.ಆಂಜನೇಯ,ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT