ADVERTISEMENT

ವಾಚಕರ ವಾಣಿ: ಯೋಜನೆಯ ಅರಿವು ಮೂಡಿಸಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 19:39 IST
Last Updated 19 ಅಕ್ಟೋಬರ್ 2020, 19:39 IST

‘ಕಿಸೆ ಬರಿದು ಬೆಲೆ ಭಾರ!’ (ಪ್ರ.ವಾ., ಅ.18) ವಿಶೇಷ ವರದಿಯು ಕೊರೊನಾ ನಮ್ಮೆಲ್ಲರ ಬದುಕಿನಲ್ಲಿ ಆಡಿದ ವಿವಿಧ ಭಂಗಿಗಳ ಪ್ರತಿರೂಪದಂತಿದೆ. ಈಗ ದೇಶದಲ್ಲಿ ಸೃಷ್ಟಿಯಾಗಿರುವ ನಿರುದ್ಯೋಗ ಸಮಸ್ಯೆ, ಹಣದುಬ್ಬರ, ಬೇಡಿಕೆ ಕುಸಿತ ಇವೆಲ್ಲವುಗಳಿಂದ ಚೇತರಿಕೆ ಬಹಳ ಕಷ್ಟ ಎಂಬುದು ತಜ್ಞರ ಅಭಿಪ್ರಾಯ. ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ, ನಿಜ. ಆದರೆ ತಮಗೆ ಅವೆಲ್ಲವೂ ಸೂಕ್ತವಾಗಿ ತಲುಪುತ್ತಿಲ್ಲ ಎಂಬುದು ಜನಸಾಮಾನ್ಯರ ಅಳಲು.

ಲಾಕ್‌ಡೌನ್‌ ಸಮಯದಲ್ಲಿ, ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮೂಲಕ ಜನಸಾಮಾನ್ಯನ ತುತ್ತಿನ ಚೀಲ ತುಂಬಿಸಬಹುದಿತ್ತು. ಆದರೆ ಹೆಚ್ಚಿನವರಿಗೆ ಈ ಯೋಜನೆಯ ಮೂಲಕ ಕೆಲಸ ಪಡೆಯುವುದು ಹೇಗೆ, ಯಾವ ಯಾವ ಕೆಲಸಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ, ಯಾರನ್ನು ಕೇಳಬೇಕು ಎಂಬ ಬಗ್ಗೆ ಅರಿವಿಲ್ಲದೆ ಯೋಜನೆಯಿಂದ ದೂರ ಉಳಿದಿದ್ದಾರೆ. ಸರ್ಕಾರ ಪ್ರತೀ ಹಳ್ಳಿಯಲ್ಲೂ ಪದವೀಧರ ನಿರುದ್ಯೋಗಿಗಳನ್ನು ಬಳಸಿಕೊಂಡು ಈ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ತರಬೇತಿ ನೀಡಿ, ಜನರಿಗೆ ತಿಳಿವಳಿಕೆ ಹಾಗೂ ಕೆಲಸ ಮಾಡುವ ವಿಧಾನಗಳನ್ನು ಪರಿಚಯಿಸಬೇಕು. ಆಗ ಮಧ್ಯವರ್ತಿ
ಗಳ ಹಾವಳಿ ತಪ್ಪಿ ಜನಸಾಮಾನ್ಯರಿಗೆ ಮತ್ತು ಪದವೀಧರ ನಿರುದ್ಯೋಗಿಗಳಿಗೆ ಇಬ್ಬರಿಗೂ ಕೆಲಸ ದೊರೆಯುತ್ತದೆ.

-ಶಿವಕುಮಾರ್ ಯರಗಟ್ಟಿಹಳ್ಳಿ, ಚನ್ನಗಿರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.