ADVERTISEMENT

ತೂತು ಮಡಕೆಯಲ್ಲಿ ಹಾಕುವುದೆಲ್ಲ ವ್ಯರ್ಥ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 16 ಜನವರಿ 2019, 20:00 IST
Last Updated 16 ಜನವರಿ 2019, 20:00 IST

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತಕ್ಕೆ ಮೂಲ ಸೌಲಭ್ಯಗಳ ಕೊರತೆ ಕಾರಣವೇ ಹೊರತು, ಅದು ಕನ್ನಡ ಮಾಧ್ಯಮ ಶಾಲೆ ಎಂಬುದಕ್ಕಲ್ಲ. ಕನ್ನಡ ಮಾಧ್ಯಮದಲ್ಲಿಯೇ‌ ಓದಿ ಪ್ರಸಿದ್ಧ ವಿಜ್ಞಾನಿಯಾದ ಸಿ.ಎನ್.ಆರ್‌. ರಾವ್ ಅವರಂತಹ ಎಷ್ಟೋ ಮಹನೀಯರು ಉದಾಹರಣೆಯಾಗಿ ಇದ್ದಾರೆ.

ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನೇ ಸರ್ಕಾರ ಪ್ರಾರಂಭ ಮಾಡಿ ಮೂಲ ಸೌಲಭ್ಯ ಒದಗಿಸದಿದ್ದರೆ ಸರ್ಕಾರಿ ಶಾಲೆಗಳ ಪರಿಸ್ಥಿತಿ ಅಲ್ಲಿಯೂ ಸೃಷ್ಟಿಯಾಗಿ ಭ್ರಮನಿರಸನವಾಗುತ್ತದೆ. ಈ ವಾಸ್ತವ ಅರ್ಥ ಮಾಡಿಕೊಳ್ಳದೆ ಕೇವಲ‌ ಮಾಧ್ಯಮ ಬದಲಾಯಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ.

ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಿ ಸೌಲಭ್ಯ ಒದಗಿಸಿದರೆ ಖಂಡಿತವಾಗಿಯೂ ಪೋಷಕರು ತಮ್ಮ ಮಕ್ಕಳನ್ನು ಅಲ್ಲಿಗೇ ಸೇರಿಸುತ್ತಾರೆ. ಸಮರ್ಥವಾಗಿ ಇಂಗ್ಲಿಷ್ ಬೋಧಿಸುವ ಶಿಕ್ಷಕರನ್ನು ನೇಮಿಸಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಿದಾಗ ಕನ್ನಡ ಮಾಧ್ಯಮ ಶಾಲೆಯೂ ಉಳಿದೀತು‌, ಮಕ್ಕಳಿಗೆ ಇಂಗ್ಲಿಷ್‌ ಕಲಿಕೆಯೂ ಸುಲಭವಾದೀತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.