ADVERTISEMENT

ಶೋಷಣೆಯಲ್ಲದೆ ಮತ್ತೇನು?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 2 ಜನವರಿ 2022, 19:30 IST
Last Updated 2 ಜನವರಿ 2022, 19:30 IST

ಅತಿಥಿ ಉಪನ್ಯಾಸಕರು ‘ಶೋಷಣೆ’ ಎಂಬ ಪದ ಬಳಸಿದ್ದಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆಕ್ಷೇಪಿಸಿ, ಸಿಟ್ಟಾಗಿದ್ದಾರೆ (ಪ್ರ.ವಾ., ಜ. 1). ಸಮಾನ ಕೆಲಸಕ್ಕೆ ಸಮಾನ ವೇತನ ನೀಡದಿದ್ದರೆ, ಐದಾರು ತಿಂಗಳಿಗೊಮ್ಮೆ ವೇತನ ನೀಡುತ್ತಿದ್ದರೆ, ಅದನ್ನು ‘ಶೋಷಣೆ’ ಎನ್ನದೆ ಇನ್ನೇನಂತ ಕರೆಯಬೇಕು. ಅದಕ್ಕೆ ಮತ್ತ್ಯಾವ ಪದ ಬಳಸಬೇಕು ಎಂಬುದನ್ನು ಅವರೇ ಹೇಳಬೇಕು.

‘ನಾವು ನಿಮ್ಮ ಬಾಗಿಲಿಗೆ ಬಂದು ಬಲವಂತವಾಗಿ ಈ ಕೆಲಸ ಮಾಡಿ ಎಂದು ಕೇಳಿದ್ದೆವಾ?’ ಎಂದೂ ಅವರು ಕೇಳಿದ್ದಾರೆ. ಆದರೆ ಪ್ರತಿವರ್ಷ ಕಾಲೇಜು ಶಿಕ್ಷಣ ಇಲಾಖೆಯು ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನಿಸುತ್ತದೆ, ಅರ್ಹತೆಯ ಆಧಾರದ ಮೇಲೆ ನೇಮಕ ಮಾಡಿಕೊಳ್ಳುತ್ತದೆ. ಅವಶ್ಯಕತೆ ಇದ್ದರೆ ಮಾತ್ರ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುತ್ತದೆ. ಹಾಗೆ ನೇಮಕವಾಗಿ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಹಾಗಿದ್ದಮೇಲೆ ಸರ್ಕಾರ ಕರೆದಾಗ ತಾನೇ ಅತಿಥಿ ಉಪನ್ಯಾಸಕರು ಸೇವೆಗೆ ಹಾಜರಾಗುವುದು?

ಸರ್ಕಾರ ನೀಡುವ ಅಲ್ಪ ಸಂಬಳವನ್ನು ನಂಬಿಕೊಂಡು ಹಲವಾರು ಅತಿಥಿ ಉಪನ್ಯಾಸಕರು ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಲಾಗಿದೆ. ಅದನ್ನು ಕೇಳುವುದರಲ್ಲಿ ತಪ್ಪೇನಿದೆ

ADVERTISEMENT

- ಅಶೋಕ ಓಜಿನಹಳ್ಳಿ,ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.