ADVERTISEMENT

ಶಾಲೆ ಸಮೀಪ ಗುಟ್ಕಾ, ಸಿಗರೇಟ್‌ ಮಾರಾಟ ನಿಷೇಧ: ನಾಮಮಾತ್ರಕ್ಕಷ್ಟೇ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 20:01 IST
Last Updated 1 ಮಾರ್ಚ್ 2019, 20:01 IST

ಶಾಲಾ ಆವರಣದಿಂದ ನೂರು ಮೀಟರ್ ಅಂತರದ ಒಳಗೆ ಗುಟ್ಕಾ, ಸಿಗರೇಟ್‌ ಮಾರಾಟ ನಿಷೇಧ ಎಂದು ಶಾಲಾ ಆವರಣ ಗೋಡೆಗಳ ಮೇಲೆ ಬರೆದಿರುವುದು ನಾಮಮಾತ್ರಕ್ಕೆ ಎಂಬಂತಾಗಿದೆ. ಗ್ರಾಮೀಣ ಭಾಗದಲ್ಲಿ ಇದು ನೂರಕ್ಕೆ ನೂರರಷ್ಟು ಸತ್ಯ. ಶಾಲೆಯ ಪಕ್ಕ ಅಥವಾ ಮುಂಭಾಗದಲ್ಲಿ ಗೂಡು ಅಂಗಡಿಗಳು ಕಂಡುಬರುತ್ತವೆ. ಇಲ್ಲಿ ಬಹುತೇಕ ಕಡೆ ಗುಟ್ಕಾ, ಸಿಗರೇಟ್ ಮಾರಾಟ ಮಾಡಲಾಗುತ್ತದೆ. ಇದು ಮಕ್ಕಳಲ್ಲಿ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ. ಇದನ್ನು ತಡೆಗಟ್ಟಲು ಆಯಾ ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು ಗ್ರಾಮಸ್ಥರು ಮುಂದಾಗಬೇಕು.

–ಶ್ರೀನಾಥ ಮರಕುಂಬಿ,ಗಂಗಾವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT