ADVERTISEMENT

ನೀರು ಪೂರೈಸದ ಅಧಿಕಾರಿಗಳಿಗೆ ನೇಣು: ಭಾವಾರ್ಥ ಗ್ರಹಿಸಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 20:00 IST
Last Updated 5 ಫೆಬ್ರುವರಿ 2019, 20:00 IST

‘ಗ್ರಾಮಸ್ಥರಿಗೆ ಶುದ್ಧ ನೀರು ಪೂರೈಸದ ಅಧಿಕಾರಿಗಳನ್ನು ನೇಣಿಗೆ ಹಾಕಿಬಿಡ್ತೀನಿ’ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವುದನ್ನು ‘ಹೀಗೂ ಹೇಳಬಹುದೇ?’ ಎಂಬ ಶೀರ್ಷಿಕೆಯಲ್ಲಿ (ವಾ.ವಾ., ಫೆ. 4) ಓದುಗರೊಬ್ಬರು ಖಂಡಿಸಿದ್ದಾರೆ. ನಾವು ಯಾವುದೇ ಹೇಳಿಕೆಯ ಭಾವಾರ್ಥವನ್ನು ಗ್ರಹಿಸುವುದು ಯಾವಾಗ?

ನೇಣಿಗೆ ಹಾಕಿಬಿಡ್ತೀನಿ ಎಂದಾಕ್ಷಣ, ಅಧಿಕಾರಿಗಳನ್ನು ಗಲ್ಲುಗಂಬಕ್ಕೆ ಏರಿಸಿಬಿಡುವುದು ಎಂದರ್ಥವೇ? ಈ ಮಾತಿನ ಹಿಂದಿರುವ, ಆ ಹಿರಿಯ ಮಹಿಳಾ ಅಧಿಕಾರಿಯ ಕಳಕಳಿ, ಆಸ್ಥೆ ಮತ್ತು ಕಾಳಜಿಯನ್ನು ಗಮನಿಸಬೇಕಲ್ಲವೇ?

ಅಧಿಕಾರಿಗಳ ಬಗೆಗಿನ ಅಸಹನೆಯನ್ನು ಇನ್ನು ಮುಂದಾದರೂ ಸಾಕುಮಾಡಿ, ಉತ್ತಮ ಅಧಿಕಾರಿಗಳನ್ನು ಪ್ರೋತ್ಸಾಹಿಸೋಣ.

ADVERTISEMENT

–ಎಸ್.ಕೆ.ಕುಮಾರ್,ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.