ADVERTISEMENT

ಸೌಲಭ್ಯಗಳನ್ನು ಕಡಿಮೆ ಮಾಡಿ

ವಿಠಲ ಆರ್.ಯಂಕಂಚಿಬಮ್ಮನಜೋಗಿ
Published 4 ನವೆಂಬರ್ 2018, 20:15 IST
Last Updated 4 ನವೆಂಬರ್ 2018, 20:15 IST

ಶಾಸಕರು, ಸಂಸದರ ಆರೋಗ್ಯ ನಿಧಿಯನ್ನು ರದ್ದು ಮಾಡುವಂತೆ ಓದುಗರೊಬ್ಬರು ಒತ್ತಾಯಿಸಿದ್ದಾರೆ (ವಾ.ವಾ., ಅ. 31). ಅದು ಸಕಾಲಿಕ ಮತ್ತು ಅಗತ್ಯವಾದ ಒತ್ತಾಯ. ಇದೊಂದೇ ಅಲ್ಲ, ಅವರಿಗೆ ಕೊಡುವ ವೇತನದ ಪ್ರಮಾಣ ಹಾಗೂ ಕೆಲವು ಭತ್ಯೆಗಳಿಗೂ ಕತ್ತರಿ ಹಾಕುವುದು ಅಗತ್ಯವಾಗಿದೆ.

ದೇಶ ಅಥವಾ ರಾಜ್ಯದ ಜನರ ಸ್ಥಿತಿ ಹೇಗೂ ಇರಲಿ, ಇವರು ತಮ್ಮ ವೇತನವನ್ನು ಹೆಚ್ಚಿಸಿಕೊಳ್ಳಲು ಮಾತ್ರ ಹಿಂಜರಿಯುವುದಿಲ್ಲ. ಅವರಿಗೆ ಕೊಡಲಾಗುವ ಭತ್ಯೆ ಹಾಗೂ ಇತರ ಸವಲತ್ತುಗಳತ್ತ ಗಮನ ಹರಿಸಿದರೆ ಅಚ್ಚರಿ ಆಗದಿರದು. ಇವರ ಫೋನ್ ಬಿಲ್‌ನಿಂದ ಆರಂಭಿಸಿ ವಾಹನದ ಇಂಧನದವರೆಗೆ ಎಲ್ಲವನ್ನೂ ಸರ್ಕಾರವೇ ಭರಿಸುತ್ತದೆ. ಇದಲ್ಲದೆ ‘ಬೇರೆಬೇರೆ ಮೂಲ’ಗಳಿಂದ ಇವರು ಹಣ ಗಳಿಸುವುದು ಇದ್ದೇ ಇದೆ. ನಮ್ಮ ಜನರ ಸಂಕಷ್ಟಗಳಿಗೆ ಮಿತಿಯೇ ಇಲ್ಲ. ಹೀಗಿರುವಾಗ ಇವರೆಲ್ಲರ ಪ್ರತಿನಿಧಿಗಳು ಎನಿಸಿಕೊಂಡವರು ಇಷ್ಟೊಂದು ದುಬಾರಿ ಜೀವನ ನಡೆಸುವುದು ಸಾಧುವಲ್ಲ. ಆದ್ದರಿಂದ ಇವರ ಸೌಲಭ್ಯಗಳಿಗೆ ಕಡಿವಾಣ ಹಾಕಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT