ADVERTISEMENT

ದ್ವಿಭಾಷಾ ಸೂತ್ರ ಸಾಕು

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 17:46 IST
Last Updated 4 ಜೂನ್ 2019, 17:46 IST

ತ್ರಿಭಾಷಾ ಸೂತ್ರ ಪಾಲನೆ ನಮಗೆ ಹೊಸದೇನೂ ಅಲ್ಲ. ಐದಾರು ದಶಕಗಳಿಂದಲೂ ಇದೆ. ಹಿಂದಿ ಪ್ರಾಬಲ್ಯದ ಯಾವುದೇ ರಾಜ್ಯದಲ್ಲಿ ಹಿಂದಿಯನ್ನು ಬಿಟ್ಟು ಬೇರೆ ಪ್ರಾಂತೀಯ ಭಾಷೆಯನ್ನು ಶಾಲೆಗಳಲ್ಲಿ ಕಲಿಸುತ್ತಿಲ್ಲ.

ನಮ್ಮ ರಾಜ್ಯದ ಮಕ್ಕಳಿಗೆ ಏಕೆ ಅಧಿಕ ಹೊರೆ? ತಮಿಳುನಾಡಿನಲ್ಲಿ ಇರುವಂತೆ ದ್ವಿಭಾಷಾ ಸೂತ್ರ ಸಾಕು. ಬೇರೆ ಬೇರೆ ರೂಪಗಳಲ್ಲಿ, ಬೇರೆ ಬೇರೆ ಹೆಸರಿನಲ್ಲಿ ಹಿಂದಿ ಹೇರುವ ಹುನ್ನಾರಗಳು ನಡೆಯುತ್ತಿವೆ. ಇದಕ್ಕೆ ಪೂರ್ಣ ವಿರಾಮ ಬೀಳಬೇಕಾಗಿದೆ.

ಡಿ.ವಿ.ಎಂ. ಪ್ರಕಾಶ್,ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.