ADVERTISEMENT

ಹಾಕಿ: ಸವಿತಾ ಸಾಧನೆ ಮಾದರಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 17:43 IST
Last Updated 6 ಅಕ್ಟೋಬರ್ 2022, 17:43 IST
   

ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ ವರ್ಷದ ಶ್ರೇಷ್ಠ ಮಹಿಳಾ ಗೋಲ್ ಕೀಪರ್‌ ಆಗಿ ಭಾರತದ ಸವಿತಾ ‍ಪೂನಿಯಾ ಅವರು ಸತತ ಎರಡನೇ ಬಾರಿಗೆ ಆಯ್ಕೆಯಾಗಿರುವುದು ಸಂತಸದ ಸಂಗತಿ. ಸವಿತಾ ಅವರ ಜತೆಗೆ ಭಾರತದ ಮುಮ್ತಾಜ್ ಖಾನ್ ಅವರು ಉದಯೋನ್ಮುಖ ಆಟಗಾರ್ತಿ ಗೌರವಕ್ಕೆ ಭಾಜನರಾಗಿರುವುದು ಹಾಕಿ ಕ್ರೀಡೆಯಲ್ಲಿ ಭಾರತೀಯ ವನಿತೆಯರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.

ಹಾಕಿಯಂಥ ಕ್ರೀಡೆಯಲ್ಲಿ ಆಟಗಾರ್ತಿಯರು ಸತತವಾಗಿ ತಮ್ಮ ದೈಹಿಕಸಾಮರ್ಥ್ಯವನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ. ಈ ದಿಸೆಯಲ್ಲಿ ಸವಿತಾ ಅವರು ಇತರ ಆಟಗಾರ್ತಿಯರಿಗೆ ಮಾದರಿಯಾಗಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಭಾರತೀಯ ವನಿತೆಯರು ತಮ್ಮ ಹಿರಿಮೆ ಮೆರೆದಿರುವುದು ಎಲ್ಲ ಕ್ಷೇತ್ರಗಳ ಮಹಿಳೆಯರಿಗೂ ಸ್ಫೂರ್ತಿದಾಯಕ.

⇒ಕೆ. ಆಶಾ,ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.